ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್ ಅಳವಡಿಕೆಗೆ ಸುಕೋ ಬ್ಯಾಂಕ್‌ನಿಂದ ಸಾಲ

ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಘೋಷಣೆ
Last Updated 6 ಜನವರಿ 2020, 12:38 IST
ಅಕ್ಷರ ಗಾತ್ರ

ದಾವಣಗೆರೆ: ಮನೆ ಹಾಗೂ ಅಂಗಡಿಗಳ ಮೇಲೆ ಸೋಲಾರ್ ಅಳವಡಿಸಿಕೊಳ್ಳಲು ‘ಸುಕೋ ಸೋಲಾರ್ ಶಕ್ತಿ’ ಹೆಸರಿನಲ್ಲಿ ಸುಕೋ ಬ್ಯಾಂಕ್‌ನಿಂದ ಸಾಲ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನೆ ಹಾಗೂ ಅಂಗಡಿಗಳ ಛಾವಣಿಯ ಮೇಲೆ ಅಳವಡಿಸಿಕೊಂಡು ವಿದ್ಯುತ್‌ ಬಿಲ್‌ನ ಹೊರೆಯನ್ನು ಇದರಿಂದ ತಪ್ಪಿಸಿಕೊಳ್ಳಬಹುದು. ಕೆಲವೊಂದು ವ್ಯಾಪಾರಿಗಳ ಪಟ್ಟಿ ಮಾಡಿದ್ದು, ಅಲ್ಲಿಂದ ಸೋಲಾರ್ ಪಡೆದುಕೊಳ್ಳಬಹುದು’ ಎಂದು ಹೇಳಿದರು.

‘ಒಂದು ಕಿಲೋವಾಟ್‌ಗೆ ತಿಂಗಳಿಗೆ ₹872 ಪಾವತಿಸಬೇಕು. ಈಗ ಮನೆ ಅಥವಾ ಅಂಗಡಿಗಳಿಗೆ ಪ್ರತಿ ತಿಂಗಳು ₹600ರಿಂದ ₹800 ವಿದ್ಯುತ್ ಬಿಲ್ ಬರುತ್ತದೆ. ಇದನ್ನು ಅಳವಡಿಸಿಕೊಂಡರೆ 5 ವರ್ಷಗಳ ನಂತರ ಸಾಲ ಪಾವತಿಯಾಗುವುದರ ಜೊತೆಗೆ ವಿದ್ಯುತ್ ಬಿಲ್ ಕಟ್ಟುವುದು ತಪ್ಪುತ್ತದೆ’ ಎಂದರು.

‘ಕರ್ನಾಟಕದಲ್ಲಿ ಸುಕೋ ಬ್ಯಾಂಕ್ 28 ಶಾಖೆಗಳನ್ನು ತೆರೆದಿದ್ದು, ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ 28 ಶಾಖೆಗಳು ಇವೆ. 25 ವರ್ಷಗಳಲ್ಲಿ ₹1100 ಕೋಟಿ ವ್ಯವಹಾರ ಮಾಡಿದ್ದು, ಮಾರ್ಚ್ 2019ಕ್ಕೆ ₹ 9 ಕೋಟಿ ಲಾಭ ಬಂದಿದೆ. ಅಷ್ಟೇ ಅಲ್ಲದೇ ಎಲ್ಲಾ ಸಹಕಾರಿ ಬ್ಯಾಂಕ್‌ಗಳು ಆಡಳಿತ ಮಂಡಳಿ ರಚನೆ ಮಾಡಬೇಕು ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ. ಆದರೆ ಸುಕೋ ಆಗಸ್ಟ್ 2019ರಲ್ಲೇ ರಚನೆ ಮಾಡಿದೆ’ ಎಂದು ಹೇಳಿದರು.

‘ಸಹಕಾರಿ ಬ್ಯಾಂಕ್‌ಗಳನ್ನು ಸಣ್ಣ ಹಣಕಾಸು ಬ್ಯಾಂಕ್ ಆಗಿ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್ ಕಾನೂನು ತರುತ್ತಿದೆ. ಏಪ್ರಿಲ್‌ 2020ರಿಂದ ನಮ್ಮ ಬ್ಯಾಂಕ್‌ ಅನ್ನು ಸಣ್ಣ ಹಣಕಾಸು ಬ್ಯಾಂಕ್ ಮಾಡಲು ಕೆಲಸ ಆರಂಭಿಸಿದ್ದೇವೆ. 1072 ಗ್ರಾಹಕರ ಖಾತೆಗೆ ಕಿಸಾನ್‌ ಸಮ್ಮಾನ್ ಯೋಜನೆಯ ಸಬ್ಸಿಡಿ ಜಮಾ ಆಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಈ ಬ್ಯಾಂಕ್‌ನಲ್ಲಿ ಪಡೆಯಬಹುದು’ಎಂದು ಹೇಳಿದರು.

‘ಹುಬ್ಬಳ್ಳಿಯ ವರ್ಧಮಾನ್ ಕೊ ಆಪರೇಟಿವ್ ಬ್ಯಾಂಕ್ ಹಾಗೂ ಬಳ್ಳಾರಿಯ ಮಹಿಳಾ ಕೊ ಆಪರೇಟಿವ್ ಬ್ಯಾಂಕ್‌ಗಳನ್ನು ಸುಕೋ ಬ್ಯಾಂಕ್‌ ಜೊತೆ ವಿಲೀನಗೊಳಿಸಿದ್ದು, ಕಾರಟಗಿಯ ಶರಣ ಬಸವೇಶ್ವರ ಕೊ ಆಪರೇಟಿವ್ ಬ್ಯಾಂಕ್‌ ಅನ್ನು ವಿಲೀನಗೊಳಿಸಲು ಮನವಿ ಸಲ್ಲಿಸಿದ್ದೇವೆ. ದಾವಣಗೆರೆಯಲ್ಲಿ ಎರಡು ವರ್ಷಗಳ ಹಿಂದೆ ಶಾಖೆ ಆರಂಭವಾಗಿದ್ದು, ₹17 ಕೋಟಿ ವ್ಯವಹಾರ ನಡೆದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT