ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಮೊದಲ ದಿನ ಐವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Published : 13 ಏಪ್ರಿಲ್ 2024, 7:41 IST
Last Updated : 13 ಏಪ್ರಿಲ್ 2024, 7:41 IST
ಫಾಲೋ ಮಾಡಿ
Comments
ದಾವಣಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿ ಹೊರಬಂದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಶಾಸಕರಾದ ಬಸವಂತಪ್ಪ ದೇವೇಂದ್ರಪ್ಪ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿ ಹೊರಬಂದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಶಾಸಕರಾದ ಬಸವಂತಪ್ಪ ದೇವೇಂದ್ರಪ್ಪ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ನಾಮಪತ್ರ ಸಲ್ಲಿಸಿ ಹೊರಬಂದು ಗೆಲುವಿನ ಸಂಕೇತ ತೋರಿದರು
ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ನಾಮಪತ್ರ ಸಲ್ಲಿಸಿ ಹೊರಬಂದು ಗೆಲುವಿನ ಸಂಕೇತ ತೋರಿದರು
‘ಬಂಡಾಯ ಪರಿಣಾಮ ಬೀರದು’
‘ನಾಮಪತ್ರ ಸಲ್ಲಿಸಿರುವುದಕ್ಕೆ ಸಂತೋಷವಾಗಿದೆ. ಹಲವೆಡೆ ಈಗಾಗಲೇ ಪ್ರಚಾರ ನಡೆಸಿದ್ದು ಗೆಲುವಿಗೆ ಪೂರಕ ವಾತಾವರಣ ಇದೆ‘ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಿಲ್ಲೆಯ 5 ಜನ ಶಾಸಕರು ಹಾಗೂ ಪರ‍ಪನಹಳ್ಳಿಯ ಶಾಸಕಿ ಲತಾ ಮಲ್ಲಿಕಾರ್ಜುನ್‌ ಜತೆಗಿದ್ದಾರೆ. ಕಾಂಗ್ರೆಸ್‌ ಮುಖಂಡರು ಮುಖಂಡರು ಕಾರ್ಯಕತರು ಗೆಲವಿಗೆ ಪರಿಶ್ರಮ ಪಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸುತ್ತೇವೆ‘ ಎಂದರು. ‘ಪ್ರತಿ ಚುನಾವಣೆಯಲ್ಲಿ ಬಂಡಾಯ ಇದ್ದೇ ಇರುತ್ತದೆ. ಜನರು ಯಾರ ಪರ ಮತ ಹಾಕಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ‘ ಎಂದರು. ‘ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ‘ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಮೊದಲ ಪಕ್ಷೇತರ ಅಭ್ಯರ್ಥಿ ನಾನು. ಮತ್ತೆ ಏಪ್ರಿಲ್‌ 18ರಂದು ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್‌ ಹೇಳಿದರು. ‘ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಂಧಾನಕ್ಕೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನನ್ನ ಸ್ಪರ್ಧೆ ಖಚಿತ. ಜನರು ನಾನು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದರಿಂದ ಸ್ಪರ್ಧಿಸಿದ್ದೇನೆ. ಇದು ಬಹು ಜನರ ಅಪೇಕ್ಷೆಯೂ ಆಗಿದೆ’ ಎಂದರು. ‘ಈಗಾಗಲೇ ಶೇ 80ರಷ್ಟು ಹಳ್ಳಿಗಳನ್ನು ಸುತ್ತಿದ್ದು ಎಲ್ಲೆಡೆ ಜನರ ಸ್ಪಂದನೆ ಉತ್ತಮವಾಗಿದೆ. ದಾವಣಗೆರೆ ನಗರದಲ್ಲಿ ಇಂದು ಪ್ರಚಾರ ನಡೆಸಿದ್ದೇನೆ. ಜನರು ಬೆಂಬಲ ನೀಡುತ್ತಿದ್ದಾರೆ. ಕೆಲವರಲ್ಲಿ ಭಯ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಮತದಾನದ ದಿನ ಆ ಭಯ ಸ್ಫೋಟಗೊಂಡು ಮತವಾಗಿ ಪರಿವರ್ತನೆಯಾಗಲಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಅವರೆಲ್ಲರೂ ನನಗೆ ಮತ ಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ನಾನು ಅವಸರ ಮಾಡಲಿಲ್ಲ. ನನಗಿಂತ ಚಿಕ್ಕ ವಯಸ್ಸಿನವರಿಗೆ ಟಿಕೆಟ್‌ ನೀಡಲಾಗಿದೆ. ನನಗೂ ನೀಡಬಹುದಿತ್ತು. ಜನರು ಕುಟುಂಬ ಕಾಜಕಾರಣ ವಿರೋಧಿಸಿ ನನಗೆ ಮತ ಹಾಕಲಿದ್ದಾರೆ. ದಾವಣಗೆರೆಲ್ಲಿ ಹೊಸಬರಿಗೆ ವಕಾಶ ಸಿಗಲಿ ಎಂಬ ಆಶಾಭಾವನೆಯಿಂದ ನನ್ನನ್ನು ಬೆಂಬಲಿಸಲಿದ್ದಾರೆ. ಆಂತರಿಕ ಸಮೀಕ್ಷೆ ನಡೆಸಿದ್ದು ಗೆಲುವು ನನ್ನದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT