ಸಂತೇಬೆನ್ನೂರು: ಗ್ರಾಮ ಪಂಚಾಯಿತಿ ನೌಕರರು ಹಾಗೂ ಚುನಾಯಿತ ಜನಪ್ರತಿನಿಧಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪರಿಣಾಮ ಸಾರ್ವಜನಿಕರು ತಮ್ಮ ನಿವೇಶನಗಳ ಇ-ಸ್ವತ್ತು ದಾಖಲೆ ಪಡೆಯಲು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ.

ಗ್ರಾಮ ಪಂಚಾಯಿತಿ ಕಚೇರಿಯು ಸಿಬ್ಬಂದಿ ಇಲ್ಲದೇ ಬಿಕೋ ಎನ್ನುತ್ತಿದೆ. ಮನೆ ಕಟ್ಟಲು ಬ್ಯಾಂಕ್ ಮೂಲಕ ಸಾಲ ಪಡೆಯಲು ಇ-ಸ್ವತ್ತು ಕಡ್ಡಾಯ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾಟ ಎಂಟ್ರಿ ಆಪೇರೇಟರ್ಗಳು ಆನ್ಲೈನ್ನಲ್ಲಿ ಇ-ಸ್ವತ್ತು ಪರಿಶೀಲನೆ ನಡೆಸಿ ಪಿಡಿಒ ಮೂಲಕ ಅನುಮೋದನೆ ಪಡೆದು ಪ್ರಿಂಟ್ ತೆಗೆಯಬೇಕು. ಮುಷ್ಕರದ ಕಾರಣ ಸಿಬ್ಬಂದಿ ಇಲ್ಲದಿರುವುದರಿಂದ ಇ-ಸ್ವತ್ತು ಸಿಗುತ್ತಿಲ್ಲ. ನಿವೇಶನಗಳ ಮಂಜೂರಾತಿಗೂ ಜಿಪಿಎಸ್ ಕಾರ್ಯ ಸ್ಥಗಿತಗೊಂಡಿದೆ. ಉದ್ಯೋಗ ಖಾತ್ರಿ ಕಾಮಗಾರಿಗೆ ಹಿನ್ನಡೆಯಾಗಿದೆ. ಕಂದಾಯ ವಸೂಲಿ ಅಭಿಯಾನ ಸ್ಥಗಿತಗೊಂಡಿದೆ. ಸರ್ಕಾರವು ಗ್ರಾಮ ಪಂಚಾಯಿತಿ ನೌಕರರು ಹಾಗೂ ಚುನಾಯಿತ ಜನಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಮೂಲಕ ಸಾರ್ವಜನಿಕರ ಕೊರತೆ ನೀಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.