ಶುಕ್ರವಾರ, ನವೆಂಬರ್ 27, 2020
24 °C

ಟೋಲ್ ಕೇಂದ್ರಕ್ಕೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಯಕೊಂಡ: ಸಮೀಪದ ಹಿರೇತೊಗಲೇರಿ ಬಳಿ ಟೋಲ್ ಕೇಂದ್ರ‌ ಮಾಡಿದರೆ ಹಲವು ಬಾರಿ ಸಂಚರಿಸುವ ರೈತರಿಗೆ, ವರ್ತಕರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ರೈತರು, ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಸ್ಥಳ ಪರಿಶೀಲನೆಗೆ ಬಂದಿದ್ದ ಎಂ.ಎಸ್.ವಿ ಕನ್ಸಲ್ಟೆನ್ಸಿಯ ಎಂಜಿನಿಯರ್ ಹಜರತ್ ಅಲಿ ಅವರಿಗೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್‌ ಕೇಂದ್ರ ತೆರೆಯಬಾರದು ಎಂದು ಆಗ್ರಹಿಸಿದರು.

ಚನ್ನಗಿರಿ ಮತ್ತು ದಾವಣಗೆರೆ ತಾಲ್ಲೂಕು ಮಧ್ಯೆ ಮರಡಿ, ಕಂದಗಲ್ಲು ಭಾಗದಲ್ಲಿ ಟೋಲ್ ಕೇಂದ್ರ ನಿರ್ಮಿಸಿದರೆ ಅನುಕೂಲವಾಗುತ್ತದೆ. ಆಸ್ಪತ್ರೆ, ಬ್ಯಾಂಕ್‌ ಮತ್ತಿತರ ತುರ್ತು ಸಂದರ್ಭದಲ್ಲಿ ಪದೇ ಪದೇ ಶುಲ್ಕ ತೆರಬೇಕಾಗುತ್ತದೆ ಎಂದು ರಾಮಗೊಂಡನಹಳ್ಳಿ ರಾಜಶೇಖರ್, ಲೋಹಿತ್, ಮಹೇಂದ್ರ, ಅಣಬೇರು ಶಿವಮೂರ್ತಿ, ಅತ್ತಿಗೆರೆ ದೇವರಾಜ್, ಮಳಲಕೆರೆ ಸದಾನಂದ ಹೇಳಿದರು.

 ಸ್ಥಳಕ್ಕೆ ಬಂದ ಶಾಸಕ ಪ್ರೊ.ಎನ್. ಲಿಂಗಣ್ಣ, ‘ದಾವಣಗೆರೆ ಹಿರೇತೊಗಲೇರಿಗೆ ತೀರಾ ಸಮೀಪ ಇವೆ. ಪದೇ ಪದೇ ಶುಲ್ಕ ತುಂಬಬೇಕಾಗುತ್ತದೆ. ಕೃಷಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿ
ಗಳಿಗೆ ತೊಂದರೆಯಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಬಸವರಾಜ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಮುರುಗೇಶ್, ‘ಈ ಸಂಬಂಧ ಸಚಿವ ಗೋವಿಂದ ಕಾರಜೋಳ, ಸಂಸದ ಸಿದ್ದೇಶ್ವರ ಅವರಿಗೆ ಮನವಿ ಮಾಡಲಾಗಿದೆ’ ಎಂದರು. ಪಿಎಸ್ಐ ಲತಾ ತಾಳೇಕರ್, ಬಾಡಾ, ಅಣಬೇರು, ತೊಗಲೇರಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು