ಗುರುವಾರ , ಸೆಪ್ಟೆಂಬರ್ 23, 2021
27 °C
ಪರೀಕ್ಷೆ ಇಲ್ಲದೇ ಪಾಸ್ : ತೃಪ್ತಿ ಇಲ್ಲದಿದ್ದರೆ ಆಗಸ್ಟ್‌ನಲ್ಲಿ ಪರೀಕ್ಷೆಗೆ ಅವಕಾಶ

ದಾವಣಗೆರೆ: ದ್ವಿತೀಯ ಪಿಯುಸಿ; 19,906 ವಿದ್ಯಾರ್ಥಿಗಳು ಉತ್ತೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 19,906 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 17,502 ವಿದ್ಯಾರ್ಥಿಗಳು ಹೊಸಬರಾಗಿದ್ದರೆ, 2,404 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.

‘ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಅಂಕದಲ್ಲಿ ಶೇ 45, ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಲ್ಲಿ ಶೇ 45 ಹಾಗೂ ದ್ವಿತೀಯ ಪಿಯುಸಿಯ ಶೇ 10ರಷ್ಟು ಶೈಕ್ಷಣಿಕ ಚಟುವಟಿಕೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಎನ್.ರಾಜು ತಿಳಿಸಿದರು.

ಕಲಾ ವಿಭಾಗದಲ್ಲಿ 5,645 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 4,846 ಫ್ರೆಶರ್ಸ್ ಹಾಗೂ 799 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತೇರ್ಗಡೆಯಾದ 5,276 ವಿದ್ಯಾರ್ಥಿಗಳಲ್ಲಿ 4,534 ಪ್ರೆಶರ್ಸ್‌ 742 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 8,985 ವಿದ್ಯಾರ್ಥಿಗಳೆಲ್ಲರೂ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 8,122 ಫ್ರೆಶರ್ಸ್ ಹಾಗೂ 863 ಪುನರಾವರ್ತಿತರು ಇದ್ದಾರೆ.

ನಗರ ಪ್ರದೇಶದವರು ಮೇಲುಗೈ: ಪಿಯುಸಿ ಫಲಿತಾಂಶದಲ್ಲಿ ನಗರ ಪ್ರದೇಶದವರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 15,902 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 1840 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.
ಕಳೆದ ಸಾಲಿನಲ್ಲಿ 13,286 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8,840 ಮಂದಿ ಉತ್ತೀರ್ಣರಾಗಿದ್ದರು. ಈ ವರ್ಷ ಈ ಪ್ರಮಾಣ ಹೆಚ್ಚಿದೆ.

ಗ್ರಾಮೀಣ ಪ್ರದೇಶದಲ್ಲಿ 4,004 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 3,440 ಫ್ರೆಶರ್ಸ್ ಹಾಗೂ 564 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ. ಕಳೆದ ಸಾಲಿನಲ್ಲಿ ಪರೀಕ್ಷೆ ಬರೆದ 2,933 ವಿದ್ಯಾರ್ಥಿಗಳಲ್ಲಿ 1,555 ಮಂದಿ ತೇರ್ಗಡೆಯಾಗಿದ್ದರು.

ವಿದ್ಯಾರ್ಥಿನಿಯರು ಮೇಲುಗೈ: ಈ ಬಾರಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. 19,906 ಮಂದಿಯಲ್ಲಿ 10,443 ವಿದ್ಯಾರ್ಥಿನಿಯರು ಇದ್ದಾರೆ. 9,463 ವಿದ್ಯಾರ್ಥಿಗಳು ಇದ್ದಾರೆ. 

ಕಳೆದ ಸಾಲಿನಲ್ಲಿ ಶೇ 64.09 ಫಲಿತಾಂಶ ಬಂದಿತ್ತು. ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದರು. 19ನೇ ಸ್ಥಾನ ಪಡೆದಿತ್ತು.

ದ್ವಿತೀಯ ಪಿಯು ಫಲಿತಾಂಶ ಅಂಕಿ ಅಂಶ
9,463: 
ವಿದ್ಯಾರ್ಥಿಗಳು ಉತ್ತೀರ್ಣ
10,443: ವಿದ್ಯಾರ್ಥಿನಿಯರು ಉತ್ತೀರ್ಣ
11,863: ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತೀರ್ಣರಾದವರು
8,043: ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾದವರು
246: ಖಾಸಗಿ ಅಭ್ಯರ್ಥಿಗಳು
4,913: ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು
2,637: ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು
2,893: ಕಲಾ ವಿಭಾಗದ ವಿದ್ಯಾರ್ಥಿನಿಯರು 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು