ಬುಧವಾರ, ಸೆಪ್ಟೆಂಬರ್ 18, 2019
24 °C

ಬಿಜೆಪಿಯಿಂದ ಸೇಡಿನ ರಾಜಕಾರಣ

Published:
Updated:
Prajavani

ದಾವಣಗೆರೆ: ಬಿಜೆಪಿಯವರು ಕಾಂಗ್ರೆಸ್‌ನವರ ಮನೆಯ ಮೇಲೆ ದಾಳಿ ಮಾಡಿಸುತ್ತಿದ್ದು, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ತಪ್ಪಿಲ್ಲದಿದ್ದರೂ ತಪ್ಪು ಹುಡುಕುವುದನ್ನು ಮಾಡುತ್ತಾ ಬಂದಿದ್ದಾರೆ. ಬಿಜೆಪಿಯವರು ಸೇಡಿನ ರಾಜಕೀಯ ಬಿಟ್ಟರೆ ಬಹಳ ಒಳ್ಳೆಯದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ಡಿಕೆಶಿ ಆಶ್ರಯ ನೀಡಿ ರಕ್ಷಿಸಿದರು. ಇದೇ ಕಾರಣಕ್ಕೆ ಡಿಕೆಶಿ ಮೇಲೆ ದಾಳಿ ಮಾಡಲಾಗಿದೆ. ಕಾಂಗ್ರೆಸ್‌ನ ಬಲಿಷ್ಠ ನಾಯಕರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಸೇಡಿನ ರಾಜಕಾರಣ ಎಷ್ಟು ದಿನ ಮಾಡುತ್ತಾರೇ ನೋಡೋಣ’ ಎಂದರು.

‘ಚುನಾವಣೆ ವೇಳೆಯಿಂದಲೂ ಬಿಜೆಪಿಯವರು ಇಂತಹ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ರೇವಣ್ಣ ಅವರ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದರು. ಬಿಜೆಪಿಯವರ ಮೇಲೆ ಏಕೆ ದಾಳಿ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಸುಳ್ಳು ನಿಜ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು’ ಎಂದು ಹೇಳಿದರು.

‘ರಾಜ್ಯದಲ್ಲಿ ತುಂಬಾ ಗಲಾಟೆಗಳು ಆಗುತ್ತಿವೆ. ಬಸ್‌ಗಳನ್ನು ಸುಡುತ್ತಿದ್ದಾರೆ. ಇದು ಅನಾವಶ್ಯಕ’ ಎಂದು ಹೇಳಿದರು

Post Comments (+)