ದಾವಣಗೆರೆ: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಗೃಹ ಕಚೇರಿ ಶಿವಪಾರ್ವತಿಯಲ್ಲಿ ಸರಳವಾಗಿ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ‘8 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಸಮಪಾಲು ಸಮಬಾಳು ತತ್ವದಡಿ ಆಡಳಿತ ನಡೆಸಿ ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರು’ ಎಂದು ಸ್ಮರಿಸಿದರು.

ಜೀತ ಪದ್ದತಿ ರದ್ದು, ಉಳುವವನೇ ಭೂಮಿ ಒಡೆಯ ಎಂಬ ಕ್ರಾಂತಿಕಾರಿಕ ಮಸೂದೆಯನ್ನು ಜಾರಿ ಮಾಡಿದ್ದರು. ತಮ್ಮ ಜಮೀನನ್ನು ಸಹ ಉಳುವವನಿಗೆ ನೀಡುವ ಮೂಲಕ ಮಾದರಿಯಾಗಿದ್ದರು. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ‘ಉಳುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿಕ ಮಸೂದೆಯನ್ನು ಜಾರಿ ಮಾಡುವ ಮೂಲಕ ಈ ರಾಜ್ಯದ ಗೆಣಿದಾರರ ವಿರೋಧ ಕಟ್ಟಿಕೊಂಡರು ಸಹ ಬಡವರ ಪರವಾಗಿ ನಿಂತ ಧೀಮಂತ ವ್ಯಕ್ತಿ ಅರಸು’ ಎಂದರು.

ಪಾಲಿಕೆ ಸದಸ್ಯ ಚಮನ್ ಸಾಬ್, ‘ಶೋಷಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿದ ಮೊದಲ ಮುಖ್ಯಮಂತ್ರಿ ಅರಸು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಜಾಕೀರ್, ಸೈಯದ್ ಚಾರ್ಲಿ, ಉದಯ್ ಕುಮಾರ್, ಶಫೀಕ್ ಪಂಡಿತ್, ಸಿಮೇಎಣ್ಣೆ ಪರಮೇಶ್, ಕೊಡಪಾನ ದಾದಾಪೀರ್, ಲಾಲ್ ಆರೀಫ್, ಶಾಮನೂರು ಕುಮಾರ್, ಹರೀಶ್ ಕೆ.ಎಲ್. ಬಸಾಪುರ, ಮೊಟ್ಟೆ ದಾದಾಪೀರ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.