ದಾವಣಗೆರೆ: ಅಮೋಘ ಪ್ರದರ್ಶನ ತೋರಿದ ಇಲ್ಲಿನ ಪಿ.ಜೆ.ಬಡಾವಣೆಯ ಎ.ಜಿ.ಬಿ ಪ್ರಥಮ ದರ್ಜೆ ಕಾಲೇಜಿನ ಪುರುಷ ಹಾಗೂ ಮಹಿಳೆಯರ ತಂಡಗಳು ದಾವಣಗೆರೆ ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿವೆ.

ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ವಿಜ್ಞಾನ ಕಾಲೇಜು (ಡಿಆರ್ಎಂ), ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಆಶ್ರಯದಲ್ಲಿ ಡಿಆರ್ಎಂ ಕಾಲೇಜಿನ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಪುರುಷ ಹಾಗೂ ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಎ.ಜಿ.ಬಿ ಕಾಲೇಜು ತಂಡದವರು ಪಾರಮ್ಯ ಮೆರೆದರು.

ಪುರುಷರ ವಿಭಾಗದಲ್ಲಿ ಡಿಆರ್ಎಂ ವಿಜ್ಞಾನ ಕಾಲೇಜು ತಂಡ ರನ್ನರ್ಸ್ ಅಪ್ ಆಯಿತು. ಹೊಸದುರ್ಗ ಹಾಗೂ ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳು ಕ್ರಮವಾಗಿ ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದವು.

ಮಹಿಳೆಯರ ವಿಭಾಗದಲ್ಲೂ ಡಿಆರ್ಎಂ ವಿಜ್ಞಾನ ಕಾಲೇಜು ತಂಡ ರನ್ನರ್ಸ್ ಅಪ್ ಆಯಿತು. ದಾವಣಗೆರೆಯ ಎ.ವಿ.ಕೆ.ಮಹಿಳಾ ಕಾಲೇಜು ತಂಡ ಮೂರನೇ ಬಹುಮಾನ ಗಳಿಸಿತು. ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು.

ಟೂರ್ನಿಯಲ್ಲಿ ಒಟ್ಟು 8 ಪ್ರಥಮ ದರ್ಜೆ ಕಾಲೇಜುಗಳ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 8 ತಂಡಗಳು ಕಣದಲ್ಲಿದ್ದವು.

ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಡಾ.ಎ.ಎಂ.ಶಿವಕುಮಾರ್, ಪ್ರೊ ಸಿ.ಎಚ್.ಮುರುಗೇಂದ್ರಪ್ಪ, ಎಚ್.ತಿಪ್ಪೇಸ್ವಾಮಿ, ಬಸವರಾಜು ವಿ.ದಮ್ಮಳ್ಳಿ, ಡಿ.ಆರ್.ಪ್ರಸನ್ನಕುಮಾರ್, ಪ್ರೊ ಎಂ.ಪಿ.ರೂಪಶ್ರೀ, ಕೆ.ವೆಂಕಟೇಶ್, ಕೆ.ಎಂ.ವೀರೇಂದ್ರ, ಸಿ.ಶಂಕ್ರಪ್ಪ, ಲೆಫ್ಟಿನೆಂಟ್ ರೇಖಾ ಎಂ.ಆರ್, ಪವನ ಎಚ್.ಆರ್, ಮಂಜುರಾಜ್ ಟಿ, ಪ್ರಶಾಂತ್ಕುಮಾರ್ ಪಿ.ಎನ್, ಗಿರಿಮಲ್ಲೇಶ್ವರ ಬಗರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.