ದಾವಣಗೆರೆ: ಮಗುವಿಗೆ ಅನುಕೂಲವಾಗುವ ಉದ್ದೇಶದಿಂದ ನಗರದಲ್ಲಿ ತಾಯಿಯ ಎದೆ (ಸ್ತನ್ಯ) ಹಾಲು ಬ್ಯಾಂಕ್ ಆರಂಭಿಸುವ ಚಿಂತನೆ ಇದೆ. ಎಂದು ಎಸ್.ಎಸ್.ಕೇರ್ ಟ್ರಸ್ಟ್ ಅಧ್ಯಕ್ಷೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಸಂದರ್ಭಗಳಲ್ಲಿ ಮಗು ಜನಿಸಿದಾಗ ಎದೆಹಾಲು ಉಣಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ಬ್ಯಾಂಕ್ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಹಿಳೆಯರ ಜೊತೆ ಸಂವಾದ ನಡೆಸಿ ಸ್ತನ್ಯಪಾನದ ಮಾಹಿತಿ ನೀಡುವುದರ ಜೊತೆಗೆ ಸಂದೇಹವನ್ನು ನಿವಾರಿಸಿದರು.
‘ಹೆರಿಗೆಯಾದ ನಂತರ ಮಕ್ಕಳು ಹಾಗೂ ತಾಯಿಯ ಬಾಂಧವ್ಯ ಬೆಳೆಯಲು ಮಾಡಬೇಕಾದ ಕಾರ್ಯಗಳ ಬಗ್ಗೆ ಮಕ್ಕಳ ತಜ್ಞರಾದ ಡಾ.ಸಿ.ಆರ್. ಬಾಣಾಪುರ್ ಮಠ ಮಾಹಿತಿ ನೀಡಿದರು.
‘ತಾಯಿ ಮತ್ತು ಮಗುವಿನ ಆರೈಕೆ ಹಾಗೂ ಆರೋಗ್ಯವಂತ ಮಗುವಿನ ಲಾಲನೆ ಪಾಲನೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆರೋಗ್ಯವಂತ ಮಗುವಿಗೆ ತಾಯಿಯ ಎದೆಯ ಹಾಲು ಮುಖ್ಯ ಎಂದು ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್ ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಅಜ್ಜಪ್ಪ, ಮಕ್ಕಳ ವಿಭಾಗದ ಡಾ. ಎನ್.ಕೆ ಕಾಳಪ್ಪನವರ್, ಡಾ. ಲತಾ ಜಿ.ಎಸ್. ಮಾತನಾಡಿದರು. ಬಾಪೂಜಿ ಮಕ್ಕಳ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಮೂಗನಗೌಡ ಪಾಟೀಲ್, ಡಾ. ಚಂದ್ರಶೇಖರ್ ಗೌಳಿ, ಡಾ. ಶಾಂತಲಾ ಇದ್ದರು.
Cut-off box - ‘ರೋಗ ತಡೆಗೆ ಎದೆಹಾಲು ಸಹಕಾರಿ’ ದಾವಣಗೆರೆ: ‘ಮಗವನ್ನು ನ್ಯೂಮೋನಿಯಾ ಅತಿಸಾರ ಭೇದಿ ಅಪೌಷ್ಠಿಕತೆಗಳನ್ನು ತಡೆಗಟ್ಟಲು ಸ್ತನ್ಯಪಾನ ಅತ್ಯಂತ ಮಹತ್ವ ಪಾತ್ರವಹಿಸುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಿ ಪಟಗೆ ತಿಳಿಸಿದರು. ಭಾಷಾ ನಗರದ ಪ್ರಸೂತಿ ಆರೈಕೆ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಹೆರಿಗೆ ಪ್ರಮಾಣ ಹೆಚ್ಚಾಗಿದ್ದರೂ ತಾಯಿ ಮಗುವಿಗೆ ಎದೆ ಹಾಲು ಕುಡಿಸುವ ಪ್ರಮಾಣ ಕಡಿಮೆ ಆಗಿದೆ. ಮಗುವಿಗೆ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕು. ಇದರಿಂದ ಶಿಶುಗಳಿಗೆ ಬರುವಂತಹ ಸೋಂಕು ರೋಗಗಳನ್ನು ತಡೆಗಟ್ಟಿ ಶಿಶು ಮರಣಗಳನ್ನು ತಪ್ಪಿಸಬಹುದು ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಉಮಾಪತಿ ಪ್ರಸೂತಿ ವೈದ್ಯಾಧಿಕಾರಿ ಡಾ. ರೇಖಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲ ಕುಮಾರ್ ಟಿ.ಎಸ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.