ದಾವಣಗೆರೆ: ‘ಸಮಾಜವಾದಿಗಳು, ಮಾನವತಾವಾದಿಗಳು, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕನಕದಾಸರಿಗೆ ಮಹರ್ಷಿ ವಾಲ್ಮೀಕಿ ಅವರು ಗುರು ಸ್ಥಾನದಲ್ಲಿ ನಿಲ್ಲುತ್ತಾರೆ’ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿಯ ಆಶ್ರಯದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹರ್ಷಿ ವಾಲ್ಮೀಕಿ ಅವರು 7 ಸಾವಿರ ವರ್ಷಗಳ ಹಿಂದೆ ರಾಮಾಯಣ ಬರೆದರು. ಅವರು ಒಂದು ಜಾತಿಗೆ ಸೀಮಿತವಲ್ಲ, ಇಡೀ ಮನುಕುಲಕ್ಕೆ ಸೇರಿದ ಮಹಾಕವಿಯಾಗಿದ್ದಾರೆ. ವಾಲ್ಮೀಕಿ ವಿಶ್ವಕಂಡ ಆದಿಕವಿ, ದಾರ್ಶನಿಕ, ಮಾನವತಾವಾದಿ, ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದರು’ ಎಂದರು.

‘ಶ್ರೇಣಿಕೃತ ವರ್ಗ ವ್ಯವಸ್ಥೆಯಲ್ಲಿ ಏಕಲವ್ಯನ ಬೆರಳು ಪಡೆದದ್ದನ್ನು ಗುರುಭಕ್ತಿ ಎನ್ನುತ್ತಾರೆ. ಇದು ಕುತಂತ್ರ ಎಂದು ಯಾರೂ ಬರೆಯುವುದಿಲ್ಲ. ಇಂದಿಗೂ ಕೆಲವರು ಕುತಂತ್ರ ನಡೆಸುತ್ತಿದ್ದಾರೆ. ಆ ಬಗ್ಗೆ ಎಚ್ಚರದಿಂದ ಇರಬೇಕು. ಜಾತಿ, ವರ್ಗ, ಶೋಷಣೆರಹಿತ ಸಮಸಮಾಜವೇ ರಾಮರಾಜ್ಯ. ಮಹಾತ್ಮ ಗಾಂಧೀಜಿ ಅವರು ಬಯಸಿದ್ದು ಪರಿಕಲ್ಪನೆಯ ರಾಮರಾಜ್ಯವನ್ನು’ ಎಂದು ಹೇಳಿದರು.

‘ಸಮುದಾಯದವರು ಹೊಡಿಬಡಿ ಸಂಸ್ಕೃತಿಯನ್ನು ಬಿಟ್ಟು, ಲೇಖನಿ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯೆ, ಸ್ವಾಭಿಮಾನ, ಉದ್ಯೋಗ ಕಂಡುಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿ ಹೊಂದಬೇಕು’ ಎಂದರು.

‘ಎಲ್ಲಾ ಸಮುದಾಯದವರು ಸೇರಿ ವಾಲ್ಮೀಕಿ ಜಯಂತಿ ಆಚರಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ವಾಲ್ಮೀಕಿಯವರ ಚಿಂತನೆಗಳನ್ನು ಯುವ ಸಮುದಾಯದವರಿಗೆ ತಲುಪಿಸುತ್ತಿರುವುದು ಶ್ರೇಷ್ಠ ಕಾರ್ಯವಾಗಿದೆ’ ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ ಗುಡ್ಡಪ್ಪ ಹೇಳಿದರು.

‘ಜಯಂತಿ ಆಚರಣೆಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸವಾಗಬೇಕು. ಹಿಂದುಳಿದ ಸಮುದಾಯಗಳು ಸುಶಿಕ್ಷಿತರಾಗಬೇಕು. ಸಮುದಾಯಕ್ಕೆ ಉಪಯುಕ್ತವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶೋಷಿತ ಸಮುದಾಯದವರೂ ವ್ಯಾಪಾರ, ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಅಣಜಿ ಚಂದ್ರಶೇಖರ್, ವಿಜಯಕುಮಾರ್, ಆನಂದ್, ಎಸ್.ಕೆ.ಚಂದ್ರಣ್ಣ, ರಾಜನಹಟ್ಟಿ ರಾಜು, ಎಲೋದಹಳ್ಳಿ ರವಿಕುಮಾರ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ಯರವನಾಗತಿಹಳ್ಳಿ ಪರಮೇಶ್ವರಪ್ಪ, ಹೂವಿನಮಡು ನಾಗರಾಜ್, ಗುಡ್ಡದ ಕುಮಾರನಹಳ್ಳಿ ಪ್ರಭು, ಎನ್.ಗಾಣದಗಟ್ಟೆ ಅಂಜು, ಗುಮ್ಮನೂರು ರುದ್ರೇಶ್, ಕಿತ್ತೂರು ನಳಿನಮ್ಮ, ಗಿರಿಯಾಪುರ ಶಶಿಕಲಾ, ಹುಚ್ಚವ್ವನಹಳ್ಳಿ ಗೌಡರಪ್ರಕಾಶ್, ಶೃತಿ ಪೂಜಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಹೊಸ ಬಸ್ ನಿಲ್ದಾಣದಿಂದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದವರೆಗೆ ವಾಲ್ಮೀಕಿ ಮಹರ್ಷಿ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರುಗು ಹೆಚ್ಚಿಸಿದವು.

‘ಜನ ಜಾತ್ರೆಗೆ ಅನುದಾನ ಕೊಡಬೇಡಿ’

‘ಮುಳ್ಳುಗದ್ದುಗೆ ಸ್ವಾಮೀಜಿಗೆ ಸರ್ಕಾರದಿಂದ ₹ 5 ಕೋಟಿ ಕೊಡಿಸಿದ್ದೆ. ಆ ಸ್ವಾಮೀಜಿ ಪ್ರಾಥಮಿಕ ಶಾಲೆ ಪ್ರೌಢಶಾಲೆ ಕಾಲೇಜು ಹಾಗೂ ವಸತಿ ನಿಲಯಗಳನ್ನು ಕಟ್ಟಿಸಿದರು. ಆದರೆ ರಾಜನಹಳ್ಳಿಗೆ ಸರ್ಕಾರದಿಂದ ₹ 36 ಕೋಟಿ ಅನುದಾನ ಸಿಕ್ಕಿದೆ. ಆದರೂ ಅಲ್ಲೊಂದು ಶಾಲೆ ಇಲ್ಲದಿರುವುದು ನೋವಿನ ಸಂಗತಿ. ಜನಜಾತ್ರೆಗೆ ಅನುದಾನ ಕೊಡಬೇಡಿ ಎಂದು ಮುಖ್ಯಮಂತ್ರಿಗೆ ಕೈಮುಗಿದು ಮನವಿ ಮಾಡುತ್ತೇನೆ. ಬದಲಾಗಿ ಬುಡಕಟ್ಟು (ಟ್ರೈಬಲ್) ವಿಶ್ವವಿದ್ಯಾಲಯ ಎಸ್.ಸಿ. ವಿಶ್ವವಿದ್ಯಾಲಯ ಸ್ಥಾಪಿಸಿ ಅರ್ಧದಷ್ಟು ಸೀಟುಗಳನ್ನು ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕು’ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

‘ವಿಧಾನಸೌಧದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಿದಂತೆ ದೆಹಲಿಯ ಸಂಸತ್ ಭವನದ ಮುಂದೆಯೂ ಪ್ರತಿಷ್ಠಾಪಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಬಿಜೆಪಿ ಜೆಡಿಎಸ್ ಮುಖಂಡರು ಒತ್ತಾಯಿಸಬೇಕು. ಬೀದರ್- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು. ಬೆಳಗಾವಿಯ ಸುವರ್ಣಸೌಧ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.