ದಾವಣಗೆರೆ: ವೇಗದ ‘ವಂದೇ ಭಾರತ್’ ರೈಲು ಸೇವೆಯಿಂದ ಮಧ್ಯ ಕರ್ನಾಟಕದ ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ವಹಿವಾಟು ವೃದ್ಧಿಗೆ ಅನುಕೂಲವಾಗಲಿದೆ. ಅಭಿವೃದ್ಧಿಗೆ ಇಂತಹ ರೈಲು ಸೇವೆ ಪೂರಕ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಬೆಂಗಳೂರು ರೈಲು ನಿಲ್ದಾಣದಿಂದ ಹೊರಟ ಸ್ವದೇಶಿ ನಿರ್ಮಿತ ‘ಬೆಂಗಳೂರು-ಬೆಳಗಾವಿ ವಂದೇ ಭಾರತ್’ ರೈಲನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಸ್ವಾಗತಿಸಿ ಅವರು ಮಾತನಾಡಿದರು. ಬೆಳಗಾವಿಯತ್ತ ಪ್ರಯಾಣ ಬೆಳೆಸಿದ ರೈಲಿಗೆ ಹಸಿರು ನಿಶಾನೆ ತೋರಿಸಿದರು.

‘ಹೆಚ್ಚಿನ ವೇಗದ ರೈಲು ಸೇವೆಯಿಂದ ಶಿಕ್ಷಣಕ್ಕಾಗಿ ಇಲ್ಲಿಗೆ ಮತ್ತು ಇಲ್ಲಿಂದ ಬೇರೆ ಕಡೆ ಹೋಗುವವರಿಗೆ ಅನುಕೂಲ ಆಗಲಿದೆ. ಆರೋಗ್ಯದ ತುರ್ತು ಸೇವೆಗಳಿಗೆ ಕೂಡ ಈ ರೈಲು ಬಳಕೆಯಾಗಲಿದೆ. ಅತಿ ವೇಗವಾಗಿ ಸಂಚರಿಸುವ ರೈಲಿನಿಂದ ಜನರಿಗೆ ಸಮಯದ ಉಳಿತಾಯ ಆಗಲಿದೆ. ವಾಣಿಜ್ಯ ಚಟುವಟಿಕೆಗಳು ಗರಿಗೆದರಲಿವೆ. ಸಾರ್ವಜನಿಕರು ಈ ರೈಲು ಸೇವೆಯನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ ನಿರ್ಮಾಣವಾದರೆ ಬೆಂಗಳೂರು ತಲುಪುವುದು ಇನ್ನೂ ಸುಲಭವಾಗಲಿದೆ. ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿದರೆ ಅನುಕೂಲವಾಗಲಿದೆ. ರೈಲು ನಿಲ್ದಾಣದಲ್ಲಿ ಗುಣಮಟ್ಟದ ಆಹಾರ ಪೂರೈಕೆ ಆಗಬೇಕಿದೆ. ಸ್ವಚ್ಛತೆಗೆ ಇನ್ನೂ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಅಗತ್ಯ ಇರುವ ಎಲ್ಲೆಡೆ ರೈಲು ಸೇವೆ ವಿಸ್ತರಿಸಬೇಕಿದೆ. ಈ ಕುರಿತು ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಶಂಬಣ್ಣ, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶಾಮಿದ್ ಹಮೀದ್ ಹಾಜರಿದ್ದರು.

‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ಅನುಷ್ಠಾನಗೊಂಡ ಬಳಿಕ ‘ವಂದೇ ಭಾರತ್’ ರೈಲು ಸಂಚಾರ ಆರಂಭಿಸಿವೆ. ರಾಜ್ಯದಲ್ಲಿ ಇಂತಹ 11 ರೈಲು ಸಂಚರಿಸುತ್ತಿರುವುದು ಹೆಮ್ಮೆಯ ಸಂಗತಿ
ಜಿ.ಎಂ.ಸಿದ್ದೇಶ್ವರ್ ಕೇಂದ್ರದ ಮಾಜಿ ಸಚಿವ

2 ‘ವಂದೇ ಭಾರತ್’ ಸೇವೆ

ಬೆಂಗಳೂರು–ಬೆಳಗಾವಿ ‘ವಂದೇ ಭಾರತ್’ ಕಾರ್ಯಾರಂಭಗೊಳ್ಳುವ ಮೂಲಕ ಜಿಲ್ಲೆಗೆ ‘ವಂದೇ ಭಾರತ್’ನ 2 ರೈಲುಗಳ ಸೇವೆ ಲಭ್ಯವಾಗುತ್ತಿದೆ. ‘ಧಾರವಾಡ–ಬೆಂಗಳೂರು’ ನಡುವೆ ‘ವಂದೇ ಭಾರತ್’ ರೈಲು ಸಂಚರಿಸುತ್ತಿದೆ. ಈ ನಡುವೆ ಬೆಳಗಾವಿ–ಬೆಂಗಳೂರು ನಡುವಿನ ರೈಲು ಸಂಚಾರ ಆರಂಭಿಸಿದ್ದರಿಂದ ಎರಡು ವೇಗದ ರೈಲುಗಳ ಸೇವೆ ಜಿಲ್ಲೆಯ ಪ್ರಯಾಣಿಕರಿಗೆ ಸಿಗುತ್ತಿವೆ. ನೂತನ ರೈಲು ನಿತ್ಯ ಬೆಳಿಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಬೆಳಿಗ್ಗೆ 9.25 ಕ್ಕೆ ದಾವಣಗೆರೆ ಬರುವ ಈ ರೈಲು ಮಧ್ಯಾಹ್ನ 1.50ಕ್ಕೆ ಬೆಂಗಳೂರು ತಲುಪಲಿದೆ. ಪ್ರತಿದಿನ ಮಧ್ಯಾಹ್ನ 2.20 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಸಂಜೆ 5.48 ಕ್ಕೆ ದಾವಣಗೆರೆಗೆ ಬಂದು ರಾತ್ರಿ 10.40 ಕ್ಕೆ ಬೆಳಗಾವಿ ತಲುಪಲಿದೆ.

ಮೋದಿ–ರಾಹುಲ್ ಪರ ಘೋಷಣೆ

‘ವಂದೇ ಭಾರತ್’ ರೈಲು ಸ್ವಾಗತಿಸುವ ಕಾರ್ಯಕ್ರಮವು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಪ್ರತಿಷ್ಠೆಗೆ ವೇದಿಕೆ ಒದಗಿಸಿತು. ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗಿದರೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆ ಮೊಳಗಿಸಿದರು. ಇದರಿಂದ ರೈಲು ನಿಲ್ದಾಣದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮಕ್ಕೂ ಮುನ್ನವೇ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ವೇದಿಕೆಗೆ ಆಗಮಿಸಿದರು. ಇವರ ಜೊತೆಗೆ ಬಿಜೆಪಿಯ ಕೆಲ ನಾಯಕರು ವೇದಿಕೆ ಏರಿದರು. ಕೆಲ ಹೊತ್ತಿನ ಬಳಿಕ ಆಗಮಿಸಿದ ಸಂಸದೆ ಡಾ.ಪ್ರಭಾ ಅವರನ್ನು ಸಿದ್ದೇಶ್ವರ ಸ್ವಾಗತಿಸಿದರು. ವೇದಿಕೆಯ ಮೇಲೆ ಅದಾಗಲೇ ಆಸೀನರಾಗಿದ್ದ ಬಿಜೆಪಿ ನಾಯಕರನ್ನು ಕಂಡು ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರಹಾಕಿದರು. ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಮೊಳಗಿಸಿದರು. ಆಗ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೊ ಹೆಸರಿನಲ್ಲಿ ಘೋಷಣೆ ಕೂಗಿದರು. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಸಿದ್ದೇಶ್ವರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.