ಹುಬ್ಬಳ್ಳಿ: ಪ್ರಯಾಣಿಕರ ಮನವಿ ಮೇರೆಗೆ ಬೆಳಗಾವಿ– ಮೀರಜ್ ಮಾರ್ಗದ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಬೆಳಗಾವಿ– ಮೀರಜ್ (07301/07303) ಹಾಗೂ ಮೀರಜ್ – ಬೆಳಗಾವಿ (07302/ 07304) ರೈಲುಗಳ ಸಂಚಾರವನ್ನು ಆಗಸ್ಟ್ 18ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಈ ರೈಲುಗಳ ಸಂಚಾರವನ್ನು ಆಗಸ್ಟ್ 11ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು.