ಬುಧವಾರ, ಅಕ್ಟೋಬರ್ 21, 2020
25 °C

ರಸ್ತೆ ಗುಂಡಿಗಳಲ್ಲಿ ದೋಣಿ ಸ್ಪರ್ಧೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಹದಗೆಟ್ಟಿರುವ ಹಾಗೂ ಗುಂಡಿಗಳೇ ತುಂಬಿರುವ ರಸ್ತೆಗಳಲ್ಲಿ ಕಾಂಗ್ರೆಸ್ ನ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಯೂತ್ ಘಟಕದ ವತಿಯಿಂದ ಮಕ್ಕಳಿಗೆ ದೋಣಿ ಬಿಡುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ನ್ಯೂ ‌ಕಾಟನ್ ಮಾರ್ಕೆಟ್ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳು ಬಿದ್ದಿವೆ. ಇದನ್ನು ಪ್ರತಿಭಟಿಸಲು ಕಾಂಗ್ರೆಸ್ ಈ ಸ್ಪರ್ಧೆ ಆಯೋಜಿಸಿದೆ.

ಹತ್ತಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ಹಾಳೆಯ ದೋಣಿಗಳನ್ನು ಬಿಟ್ಟು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಬ್ಯೂಸಿಯಾಗಿದ್ದಾರೆ ಎನ್ನುವ ಸಂದೇಶ ಬರೆದು ಸಚಿವ ಜಗದೀಶ ಶೆಟ್ಟರ್ ಅವರ ಚಿತ್ರವನ್ನು ಬಿಡಿಸಿದ್ದಾರೆ. ಶೆಟ್ಟರ್ ಮಲಗಿರುವ ಹಾಗೂ ಆರಾಮವಾಗಿ ಖುರ್ಚಿ ಮೇಲೆ ಕುಳಿತ ಚಿತ್ರಗಳ ಪೇಪರ್ ಗಳನ್ನು ದೋಣಿ ಮಾಡಿ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ‌ನಿಂತಿರುವ ಮಳೆಯ‌ ನೀರಿನಲ್ಲಿ ದೋಣಿಗಳನ್ನು ಹರಿಯ ಬಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು