ಸಂವಿಧಾನ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ಸನಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು
ಸಂವಿಧಾನ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಪ್ರಧಾನ ಅಂಚೆಕಚೇರಿ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಸಮತಾ ಸೈನಿಕ ದಳ ಹಾಗೂ ಬಹುಜನ ಧ್ವಜ ಹಾಗೂ ಸಂವಿಧಾನ ರಕ್ಷಾ ಸಮಿತಿ ಸದಸ್ಯರು ಬುಧವಾರ ಮಾಲಾರ್ಪಣೆ ಮಾಡಿದರು. ಶಂಕರ ಅಜಮನಿ ಸದಾನಂದ ತೇರದಾಳ ಉಮೇಶ ಚಲವಾದಿ ರಾಜಪ್ಪ ಕಾಳೆ ಫಕೀರಪ್ಪ ಚಲವಾದಿ ಸರಸ್ವತಿ ಕಟ್ಟಿಮನಿ ಶಮೀಮ್ ಮುಲ್ಲಾ ಎ.ಎ. ಬಂಗಾಲಿ ದ್ರಾಕ್ಷಾಯಿಣಿ ಮಹಾದೇವಿ ಬಿಷ್ಟಪ್ಪನವರ ರೇಣುಕಾ ಬೇಗಂ ನದಾಫ ಶೋಭಾ ಮಾದರ ಕಮಲಮ್ಮ ಹೊಸಮನಿ ಹಾಜರಿದ್ದರು
ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ವತಿಯಿಂದ ಹುಬ್ಬಳ್ಳಿಯ ಪ್ರಧಾನ ಅಂಚೆಕಚೇರಿ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಬುಧವಾರ ಪುಷ್ಪ ನಮನ ಸಲ್ಲಿಸಲಾಯಿತು. ಗುರುನಾಥ ಉಳ್ಳಿಕಾಶಿ ಗುರಪ್ಪ ಚಲವಾದಿ ಮಂಜು ಸ್ವಾಮಿ ರೇವಣ ಸಿದ್ದಪ್ಪ ದೊಡ್ಡಮನಿ ದೇವಣ್ಣ ಇಟಗಿ ಕವಿತಾ ನಾಯ್ಕರ ಮಂಜುಳಾ ಬೆಣಗಿ ಬಾಬರ ಖೋಜೆ ಚೇತನಾ ಲಿಂಗದಾಳ ರಾಜಪ್ಪ ಕಾಳೆ ವಿನಾಯಕ ಅಮರಗೋಳ ಶಂಕರ ಭೋಜಗಾರ ಅಶೋಕ ಹಾದಿಮನಿ ಅಶೋಕ ಕಾಶೇನವರ ಲೋಹಿತ ಗಾಮನಗಟ್ಟಿ ರವಿ ಕದಂ ಆನಂದ ಹಂಜಗಿ ನಾಗರಾಜ ಕೆ. ಇಮ್ತಿಯಾಝ ಬಿಜಾಪುರ ಸುಲೇಮಾನ ಅದೋನಿ ಧನ್ಯಕುಮಾರ ಕೋಟಿ ರವಿ ಹನುಮಸಾಗರ ಮಂಜು ಬಳ್ಳಾರಿ ಇಮ್ತಿಯಾಝ ಬ್ಯಾಳಿ ಪಾಲ್ಗೊಂಡರು
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು