ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟೂರು ಅಭಿವೃದ್ಧಿಗೆ ಆದ್ಯತೆ- ಶಾಸಕ ಅಬ್ಬಯ್ಯ

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ
Last Updated 13 ಮಾರ್ಚ್ 2022, 14:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಂಟೂರಿನಲ್ಲಿ ‌‌₹1.65 ವೆಚ್ಚದಲ್ಲಿ ಯುಜಿಡಿ, ತೆರೆದ ಚರಂಡಿ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ 62ನೇ ವಾರ್ಡ್‌ ವ್ಯಾಪ್ತಿಯ ಮಂಟೂರು ರಸ್ತೆಯ ಅಂಬೇಡ್ಕರ್ ಕಾಲೊನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಮಂಟೂರು ರಸ್ತೆ ಆರಂಭದಿಂದ ಕೊನೆ ಭಾಗದ ಕಾಲೊನಿಗಳವರೆಗೂ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಗಟಾರ, ಪಾದಚಾರಿ ಮಾರ್ಗ, ಕುಡಿಯುವ ನೀರಿನ ವ್ಯವಸ್ಥೆ, ಯುಜಿಡಿ, ಬೀದಿದೀಪ, ಸಮುದಾಯ ಭವನ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

₹1.40 ಕೋಟಿ ವೆಚ್ಚದಲ್ಲಿ ಯುಜಿಡಿ, ತೆರೆದ ಚರಂಡಿ, ಸಿಸಿ ರಸ್ತೆ ಹಾಗೂ ₹25 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಕಾಲನಿಯಿಂದ ಮಂಟೂರು ಮುಖ್ಯರಸ್ತೆಯ ನಾಲಾವರೆಗೆ ಯುಜಿಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಮಹಾನಗರ ಪಾಲಿಕೆ ಸದಸ್ಯೆ ಸರತಾಜ ಅದವಾನಿ, ವಾರ್ಡ್‌ ಅಧ್ಯಕ್ಷ ಶರೀಫ ಅದವಾನಿ, ಮುಖಂಡರಾದ ಶ್ರೀನಿವಾಸ ರಟ್ಟಿ, ಕೆ. ಬರ್ನಾಬಸ್, ಸುಬ್ರಮಣಿ, ಲಕ್ಷ್ಮಣ, ಮಂಜುನಾಥ, ಪ್ರೇಮ್, ಲತೀಫ್ ಶರಬತ್ತವಾಲ, ತೌಫೀಕ್ ಕುಸುಗಲ್, ಬಾಷಾ ಬೇಪಾರಿ, ಮುಸ್ತಾಕ್ ಶೆರೆವಾಡ, ಇಕ್ಬಾಲ್ ಶೇಖ್, ರೆಹಮಾನ್ ಶಿಂಗೋಟಿ, ಇಮ್ತಿಯಾಜ್ ಕಳಸ, ಇಮ್ರಾನ ಚೌಧರಿ, ನಿಸ್ಸಾರ್ ಶಿಂಗೋಟಿ, ಶಿವಾಜಿ, ಸುಮಿತ್ರ ಪೀಟರ್, ಮೆಹಬೂಬೀ, ಲೋಕೋಪಯೋಗಿ ಇಲಾಖೆ ಅಧಿಕಾರಿ ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT