ಹುಬ್ಬಳ್ಳಿ: ವಿಭಿನ್ನ ಬಗೆಯ ಕೀಟಗಳು, ಅವುಗಳಿಂದ ತಯಾರಿಸಿದ ವಿಶೇಷ ಖಾದ್ಯಗಳು, ಸಾವಯವ ಗೊಬ್ಬರ, ಗೊಂಬೆಗಳು, ಆಭರಣ, ಕೀ ಚೈನ್, ಕೀಟಗಳ ಅಕ್ವೇರಿಯಂ... ಹೀಗೆ ಕೀಟಗಳ ಕುರಿತು ವಿಸ್ಮಯಕಾರಿ ಪ್ರಪಂಚವನ್ನು ತೆರೆದಿಟ್ಟಿದ್ದು ಧಾರವಾಡದ ಕೃಷಿ ಮೇಳ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರ ವಿಭಾಗದ ವಿದ್ಯರ್ಥಿಗಳು, ಪ್ರಾಧ್ಯಾಪಕರು ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ ಗಮನ ಸೆಳೆಯುತ್ತಿದೆ.

ವಿವಿಧ ಕೀಟಗಳನ್ನು ಬಳಸಿ ಸಿದ್ಧಪಡಿಸಿದ ಚಿಟ್ಟೆ ಮಾದರಿ ಜನರನ್ನು ಆಕರ್ಷಿಸಿತು. ಮೃಗಾಲಯದ ಮಾದರಿಯಲ್ಲಿ ನಿರ್ಮಿಸಿದ ಕೀಟಾಲಯದಲ್ಲಿ ವಿಭಿನ್ನ ಬಗೆಯ ಕೀಟಗಳನ್ನು ಇಟ್ಟು, ಅವುಗಳ ಪರಿಚಯ ಫಲಕ ಅಳವಡಿಸಲಾಗಿದೆ. ಕೀಟಗಳ ಕೈಗೆ ಬ್ಯಾಟ್, ಬಾಲ್ ಕೊಟ್ಟು, ‘ಈ ಸಲ ಕಪ್ಪು ನಮ್ದು’ ಎನ್ನುವ ಫಲಕದೊಂದಿಗೆ ನಿರ್ಮಿಸಿರುವ ಆರ್ಸಿಬಿ ವಿಜಯೋತ್ಸವ ಮಾದರಿ ಗಮನ ಸೆಳೆಯಿತು. ಕೀಟಗಳನ್ನು ಬಳಸಿ ಮಾಡಿರುವ ಆಪರೇಷನ್ ಸಿಂಧೂರ ಮಾದರಿಯೂ ಆಕರ್ಷಣೆಯ ಕೇಂದ್ರವಾಗಿದೆ.

ಕೀಟಗಳ ಅಕ್ವೇರಿಯಂ:

ಕೆಲ ಅಪರೂಪದ ಕೀಟಗಳು ಜಲವಾಸಿಯೂ ಹೌದು. ಅವುಗಳನ್ನು ಮೀನುಗಳಂತೆ ಅಕ್ವೇರಿಯಂನೊಳಗೆ ಹಾಕಿದ್ದು ಜನರ ಗಮನ ಸೆಳೆಯಿತು. ನೀರಿನ ಚೇಳು, ನೀರಿನ ದುಂಬಿ, ಡ್ರ್ಯಾಗನ್ ಪ್ಲೈ, ಅಪ್ಸರೆ ಕೀಟ, ರಂಗೋಲಿ ಹುಳುಗಳು ಅಕ್ವೇರಿಯಂನೊಳಗೆ ಓಡಾಡುತ್ತ ಎಲ್ಲರನ್ನು ರೋಮಾಂಚನಗೊಳಿಸಿದವು.

ರೊಬೊಟಿಕ್ಸ್ ಕೀಟ:

ಕೀಟ ರೂಪದ ರೊಬೊಟಿಕ್ಸ್ ಮಾದರಿ ಕುರಿತು ಮೇಳದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಯಿತು. ‘ಈ ರೊಬೊಟಿಕ್ಸ್ ಕೀಟಗಳನ್ನು ರಕ್ಷಣೆಯ ಉದ್ದೇಶ, ಪರಿಸರ ರಕ್ಷಣೆ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆಗಾಗಿ ಭವಿಷ್ಯದಲ್ಲಿ ಬಳಸಬಹುದು. ಚೀನಾ ದೇಶದಲ್ಲಿ ಇದರ ಬಳಕೆಯಾಗುತ್ತಿದ್ದು, ಭಾರತದ ರಕ್ಷಣಾ ಇಲಾಖೆಯೂ ಇದನ್ನೂ ಅಳವಡಿಸಿಕೊಂಡಿದೆ’ ಎಂದು ವಿ.ವಿಯ ಪ್ರಾಧ್ಯಾಪಕ ಮಹಾಬಲೇಶ್ವರ ಗಣಪತಿ ಭಟ್ ತಿಳಿಸಿದರು.

ಗಮನ ಸೆಳೆದ ಕೀಟ ಖಾದ್ಯ

ಕೀಟಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಬೆರಗು ಮೂಡಿಸಿದವು. ರೇಷ್ಮೆಕೋಶ ಡ್ರೈ ರೇಷ್ಮೆಕೋಶ ಕಟ್ಲೆಟ್ ಕೀಟ ಮಿಶ್ರಣ ಟಿಕ್ಕಾ ಮಿಡತೆ 65 ಕೀಟ ಮಿಶ್ರಣ ಪಿಜ್ಜಾ ಬಿಎಸ್ಎಫ್ ಮಸಾಲ ಮಿಶ್ರ ಕೀಟಗಳ ಡ್ರೈ ಜೀರುಂಡೆ ಟಿಕ್ಕಾ.. ಹೀಗೆ ಬಗೆಬಗೆಯ ಖಾದ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ‘ಕೀಟಗಳು ಹೆಚ್ಚು ಪೋಷಾಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೂ ಉತ್ತಮ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೀಟಗಳನ್ನು ಆಹಾರವಾಗಿ ಸೇವಿಸುವ ರೂಢಿ ಇದೆ. ರಾಜ್ಯದ ಕರಾವಳಿ ಭಾಗದಲ್ಲೂ ಕೆಲವು ಕೀಟಗಳನ್ನು ಆಹಾರದಲ್ಲಿ ಬಳಸುತ್ತಾರೆ. ಕೀಟಗಳ ಆಹಾರ ಸೇವನೆ ಹೆಚ್ಚಿದಂತೆ ಕೀಟಗಳ ಸಾಕಾಣಿಕೆಗೆ ಹೆಚ್ಚು ಪ್ರಾಮುಖ್ಯತೆ ದೊರೆಯುವುದು. ಅಮೇಜಾನ್ನಂತಹ ಆನ್ಲೈನ್ ಶಾಪಿಂಗ್ ಆ್ಯಪ್ನಲ್ಲೂ ಕೀಟಗಳ ಖಾದ್ಯಕ್ಕೆ ಬೇಡಿಕೆಯಿದೆ’ ಎಂದು ಸಂಶೋಧನಾ ವಿದ್ಯಾರ್ಥಿ ಶಿವಕುಮಾರ್ ಕೆ.ಟಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.