ಹುಬ್ಬಳ್ಳಿ: ‘ಈಗಿನ ಕಾಂಗ್ರೆಸ್ಗೂ, ಮಹಾತ್ಮ ಗಾಂಧೀಜಿಗೂ ಏನು ಸಂಬಂಧ. ಈಗಿನದು ನಕಲಿ ಕಾಂಗ್ರೆಸ್, ಹಳೇ ಕಾಂಗ್ರೆಸ್ ತುಂಡು ತುಂಡಾಗಿ ಹೋಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
.ಫೇಕ್ ಎನ್ ಕೌಂಟರ್ ಹೇಳಿಕೆ | ಜೋಶಿ ಅವರಿಗೆ ಶೋಭೆ ತರುವುದಿಲ್ಲ: ಎಚ್.ಕೆ.ಪಾಟೀಲ.
ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಶತಮಾನೋತ್ಸವದ ಕುರಿತು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು. ಅದು ಕಳ್ಳಕಾಕರ ಗುಂಪು. ಇವರ್ಯಾರು ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ನ ವಾರಸುದಾರಲ್ಲ. ನಕಲಿ ಕಾಂಗ್ರೆಸ್ಗೆ ಸರ್ಕಾರಿ ದುಡ್ಡು ಯಾಕೆ ಹಾಕುತ್ತೀರ’ ಎಂದು ಪ್ರಶ್ನಿಸಿದರು.
.ಭಾರತದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ದ್ವಿಗುಣ: ಪ್ರಲ್ಹಾದ ಜೋಶಿ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ಅವರನ್ನು ಕಾರಿನಲ್ಲಿ ಸುತ್ತಾಡಿಸಿದ್ದು ತನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡುತ್ತಾರೆ. ಅಂದರೆ, ಗೃಹ ಸಚಿವರನ್ನೇ ಕತ್ತಲಲ್ಲಿ ಇಟ್ಟು ಪೊಲೀಸರು ಹೀಗೆ ಮಾಡಿದ್ದಾರಾ? ಜಿಲ್ಲಾ ಉಸ್ತುವಾರಿ ಸಚಿವರು ಸಹ ಪೊಲೀಸರು ತಪ್ಪು ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಸೂತ್ರಧಾರರು ಯಾರು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಖು’ ಎಂದು ಆಗ್ರಹಿಸಿದರು.

ಸಿ.ಟಿ. ರವಿ ಅವರ ಆಕ್ಷೇಪಾರ್ಹ ಹೇಳಿಕೆ ಮುಚ್ಚಿಕೊಳ್ಳಲು ಬಿಜೆಪಿ ಮುಖಂಡರು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ’ ಎನ್ನುವ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಸಿದ ಸಚಿವ ಜೋಶಿ, ‘ನಾವು ಯಾವಾಗಲೂ ಮರ್ಯಾದೆಯಿಂದಲೇ ವರ್ತಿಸುತ್ತಿದ್ದೇವೆ. ಅವರ ಹಾಗೆ ನಾವೇನೂ ಮರ್ಯಾದೆ ಬಿಟ್ಟಿಲ್ಲ. ಕಾಂಗ್ರೆಸ್ನಲ್ಲಿ ಸಂಸ್ಕೃತಿ, ಸಂಸ್ಕಾರ ಅನ್ನುವುದೇ ಇಲ್ಲ. ಕೆಲವಷ್ಟು ನಾಯಕರನ್ನು ಹೊರತು ಪಡಿಸಿ ಉಳಿದವರೆಲ್ಲ ಅನಾಗರಿಕರ ಹಾಗೆ ವರ್ತಿಸುತ್ತಾರೆ’ ಎಂದು ಹರಿಹಾಯ್ದರು.
.ಹೇಳಿಕೆ ವಿವಾದ: ಡಿಕುನ್ಹ ಕ್ಷಮೆ ಕೇಳಿದ ಸಚಿವ ಪ್ರಲ್ಹಾದ ಜೋಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.