ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿ–ಗಣೇಶ ಹಬ್ಬ: ಖರೀದಿ ಭರಾಟೆ ಜೋರು

Published : 5 ಸೆಪ್ಟೆಂಬರ್ 2024, 16:00 IST
Last Updated : 5 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ನಗರದಲ್ಲಿ ಗೌರಿ– ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ತಯಾರಿ ನಡೆಸಿದ್ದು, ಇದಕ್ಕೆ ಪೂರಕವಾಗಿ ಗುರುವಾರ ಇಲ್ಲಿನ ದುರ್ಗದ ಬೈಲ್‌ ಹಾಗೂ ಮಹಾತ್ಮಗಾಂಧಿ ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತು, ಪೂಜಾ ಸಾಮಗ್ರಿ ಹಾಗೂ ಹೂವು ಹಣ್ಣುಗಳ ಮಾರಾಟ, ಖರೀದಿಯ ಭರಾಟೆ ತುಸು ಜೋರಾಗಿಯೇ ನಡೆಯಿತು. 

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲೆಡೆ ಗೌರಿಹಬ್ಬ ಆಚರಿಸಲಾಗುತ್ತಿದೆ. ಇದರಿಂದಾಗಿ ಮಾರುಕಟ್ಟೆ ಪ್ರದೇಶವು ದಿನವಿಡೀ ಮಾರಾಟಗಾರರು ಹಾಗೂ ಗ್ರಾಹಕರಿಂದ ತುಂಬಿತ್ತು. ಹಬ್ಬದ ನಿಮ್ಮಿತ್ತ ಮನೆ ಹಾಗೂ ಗಣೇಶ ಪ್ರತಿಷ್ಠಾಪನೆಯ ಮಂಟಪವನ್ನು ಅಲಂಕರಿಸಲು ಅಗತ್ಯವಾದ ಪ್ಲಾಸ್ಟಿಕ್‌ ಹೂವು ಹಾಗೂ ವಿದ್ಯುತ್‌ ಅಲಂಕಾರಿಕ ವಸ್ತುಗಳ ಮಾರಾಟವು ದುರ್ಗದ ಬೈಲು ಮಾರುಕಟ್ಟೆಯಲ್ಲಿ ತುಸು ಜೋರಾಗಿಯೇ ನಡೆಯಿತು. 

ಪ್ಲಾಸ್ಟಿಕ್‌ನಿಂದ ತಯಾರಿಸಿದ ಅಲಂಕಾರಿಕ ಹೂವು, ಬಾಗಿಲ ತೋರಣಗಳು ಆಕರ್ಷಕ ವಿನ್ಯಾಸಗಳ ಆಧಾರದ ಮೇಲೆ ₹100ರಿಂದ ₹400 ತನಕ ಮಾರಾಟವಾದವು. ಬಾಳೆಹಣ್ಣು, ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳ ದರದಲ್ಲಿ ಅಷ್ಟೇನು ವ್ಯತ್ಯಾಸವಿರಲಿಲ್ಲ. ಆದರೆ, ಕನಕಾಂಬರ, ಸೇವಂತಿಗೆ, ಮಲ್ಲಿಗೆ ಹಾಗೂ ಗುಲಾಬಿ ಹೂವುಗಳ ಬೆಲೆ ತುಸು ಹೆಚ್ಚೇ ಇತ್ತು.

ಇದೇ ವೇಳೆ ಗೌರಿ ಮೂರ್ತಿಗಳ ಮಾರಾಟವೂ ನಡೆಯಿತು. ಮಹಿಳೆಯರು, ಯುವತಿಯರು ಗೌರಿಮೂರ್ತಿಯನ್ನು ಚೌಕಾಸಿ ದರದಲ್ಲಿ ಖರೀದಿಸಿದ್ದು, ದುರ್ಗದ ಬೈಲು ಮಾರುಕಟ್ಟೆಯಲ್ಲಿ ಕಂಡುಬಂದಿತು. ಕುಟುಂಬ ಸಮೇತರಾಗಿ ಬಂದಿದ್ದ ಜನರು ಪೂಜಾ ಸಾಮಗ್ರಿಗಳ ಖರೀದಿಯ ಜೊತೆಗೆ ಹೊಸಬಟ್ಟೆಗಳನ್ನೂ ಖರೀದಿಸಿದರು. 

ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮನೆ, ಮನೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧವಾಗುತ್ತಿರುವ ಬೃಹತ್ ವೇದಿಕೆ, ಮಂಟಪಗಳ ನಿರ್ಮಾಣ ಕಾರ್ಯ ಅಂತಿಮ ಸ್ವರೂಪದಲ್ಲಿದ್ದದ್ದು ಸಹ ಅಲ್ಲಲ್ಲಿ ಕಂಡುಬಂದಿತು. 

ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ದುರ್ಗದ ಬೈಲ್ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಸಾರ್ವಜನಿಕರು ಅಲಂಕಾರಿಕ ಹೂವು ವಸ್ತುಗಳ ಖರೀದಿಸಿದರು
ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ದುರ್ಗದ ಬೈಲ್ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಸಾರ್ವಜನಿಕರು ಅಲಂಕಾರಿಕ ಹೂವು ವಸ್ತುಗಳ ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT