ಉಡುಪಿ: ಟ್ರ್ಯಾಕ್ನಲ್ಲಿ ಮಿಂಚು ಹರಿಸಿದ ಧಾರವಾಡದ ಪ್ರಸನ್ನ ಕುಮಾರ್, ಬೆಳಗಾವಿಯ ವೈಶಾಲಿ ಮತ್ತು ಬೆಂಗಳೂರಿನ ಓಂಕಾರ್ ಇಲ್ಲಿ ಶನಿವಾರ ಆರಂಭಗೊಂಡ ರಾಜ್ಯ ಜೂನಿಯರ್ ಮತ್ತು 23 ವರ್ಷದೊಳಗಿನವರ ಅಥ್ಲೆಟಿಕ್ ಕೂಟದಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಬೆಂಗಳೂರಿನ ಖೇಲೊ ಇಂಡಿಯಾ ಕೇಂದ್ರದಲ್ಲಿ ವಸಂತ್ ಅವರ ಬಳಿ ತರಬೇತಿ ಪಡೆಯುತ್ತಿರುವ ಧಾರವಾಡ ಕೆಸಿಡಿ ಕಾಲೇಜಿನ ಪದವಿ ವಿದ್ಯಾರ್ಥಿ ಪ್ರಸನ್ನ, 23 ವರ್ಷದೊಳಗಿನ ಪುರುಷರ 100 ಮೀಟರ್ಸ್ ಓಟದಲ್ಲಿ 10.52 ಸೆಕೆಂಡುಗಳಲ್ಲಿ ಗುರಿ ತಲುಪಿದರು. 2022ರಲ್ಲಿ ಶಶಿಕಾಂತ್ ವಿ.ಎ (10.55) ಬರೆದ ದಾಖಲೆಯನ್ನು ಪ್ರಸನ್ನ ಮುರಿದರು.

ಮಹಿಳೆಯರ 800 ಮೀಟರ್ಸ್ ಓಟದಲ್ಲಿ ವೈಶಾಲಿ ರಾವಲ್ 2 ನಿಮಿಷ 12.42 ಸೆಕೆಂಡುಗಳಲ್ಲಿ ಗುರಿ ತಲುಪಿ, 1995ರಲ್ಲಿ ಫೆಮಿ ಥಾಮಸ್ (2:13.8) ಸ್ಥಾಪಿಸಿದ ದಾಖಲೆ ಮುರಿದರು. ಪುರುಷರ 10 ಸಾವಿರ ಮೀ ಓಟದಲ್ಲಿ ಬೆಂಗಳೂರಿನ ಓಂಕಾರ್ 2023ರಲ್ಲಿ ವೈಭವ್ ಎಂ.ಪಿ ಮಾಡಿದ್ದ ದಾಖಲೆ ಮುರಿದರು. ಓಂಕಾರ್ 29 ನಿಮಿಷ 48.04 ಸೆಕೆಂಡುಗಳಲ್ಲಿ ಅಂತಿಮ ಗೆರೆ ದಾಟಿದರು. ವೈಭವ್ 32ನಿ 17 ಸೆಕೆಂಡುಗಳ ಸಾಧನೆ ಮಾಡಿದ್ದರು.

23 ವರ್ಷದೊಳಗಿನ ಪುರುಷರ ಹೈಜಂಪ್ನಲ್ಲಿ 2.08 ಮೀಟರ್ಸ್ ಸಾಧನೆಯೊಂದಿಗೆ ಶಿವಮೊಗ್ಗದ ಸುದೀಪ್ ಕಳೆದ ವರ್ಷ ತಮ್ಮದೇ ಹೆಸರಿನಲ್ಲಿ ಸೃಷ್ಟಿಯಾಗಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಆತಿಥೇಯ ಉಡುಪಿ ಜಿಲ್ಲೆಗೆ 20 ವರ್ಷದೊಳಗಿನ ಬಾಲಕಿಯರ ಡಿಸ್ಕಸ್ ಥ್ರೋದಲ್ಲಿ ಮಾಧುರ್ಯ ದಾಖಲೆಯ ಗರಿ ಮೂಡಿಸಿದರು. 43.50 ಮೀ ದೂರ ಎಸೆದ ಅವರು 2014ರಲ್ಲಿ ಪ್ರಿಯಾಂಕಾ ಜೆ.ಎಸ್ (41.93ಮೀ) ಮಾಡಿದ್ದ ದಾಖಲೆ ಹಿಂದಿಕ್ಕಿದರು. 20 ವರ್ಷದೊಳಗಿನ ಬಾಲಕರ ಜಾವೆಲಿನ್ ಥ್ರೋದಲ್ಲಿ ಬೆಳಗಾವಿಯ ಕಲ್ಲೋಲೆಪ್ಪ 70.21 ದೂರ ಎಸೆದು 2023ರಲ್ಲಿ ಶಶಾಂಕ್ ಪಾಟೀಲ್ (66.82ಮೀ) ಮಾಡಿದ್ದ ದಾಖಲೆ ಮುರಿದರು.

20 ವರ್ಷದೊಳಗಿನ ಬಾಲಕರ 800 ಮೀ ಓಟದಲ್ಲೂ ದಾಖಲೆ ಸೃಷ್ಟಿಯಾಯಿತು. 1ನಿ 51.83 ಸೆಕೆಂಡುಗಳಲ್ಲಿ ಗುರಿ ತಲುಪಿದ ಬೆಂಗಳೂರಿನ ಕಲ್ಯಾಣ್ ಜೆ.ಆರ್ 2023ರಲ್ಲಿ ಲೋಕೇಶ್ (1:52.45) ನಿರ್ಮಿಸಿದ್ದ ದಾಖಲೆ ಮುರಿದರು. 16 ವರ್ಷದೊಳಗಿನ ಬಾಲಕರ 80 ಮೀ ಹರ್ಡಲ್ಸ್ನಲ್ಲಿ ದಕ್ಷಿಣ ಕನ್ನಡದ ಜ್ಞಾನದೇವ್ (10.99ಸೆ) 2023ರಲ್ಲಿ ವೀರೇಶ್ ಪಿ (11.1ಸೆ) ಮಾಡಿದ ದಾಖಲೆ ಮುರಿದರು. 18 ವರ್ಷದೊಳಗಿನ ಬಾಲಕರ 1000 ಮೀ ಓಟದಲ್ಲಿ ಚಿಕ್ಕಮಗಳೂರಿನ ಪ್ರಥಮ್ ಎಚ್.ಡಿ (2ನಿ 26.76ಸೆ) ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು. 18 ವರ್ಷದೊಳಗಿನ ಬಾಲಕಿಯರ 1000 ಮೀ ಓಟದಲ್ಲಿ ದಕ್ಷಿಣ ಕನ್ನಡದ ನಾಗಿಣಿ ನಾಯಕ್ (2ನಿ 51.52ಸೆ) ಕಳೆದ ವರ್ಷ ಪ್ರಣತಿ (2ನಿ 57.0ಸೆ) ಮಾಡಿದ ದಾಖಲೆ ಮುರಿದರು.

23 ವರ್ಷದೊಳಗಿನವರ ಫಲಿತಾಂಶಗಳು: ಪುರುಷರ 100 ಮೀ ಓಟ: ಪ್ರಸನ್ನ ಕುಮಾರ್ (ಧಾರವಾಡ)–1. ಕಾಲ: 10.52, ಆರ್ಯನ್ ಮನೋಜ್ (ಬೆಂಗಳೂರು)–2, ಗೌತಮ್ ಎಂ (ಶಿವಮೊಗ್ಗ)–3; 800 ಮೀ ಓಟ: ಸಂಗಮೇಶ್ ಅಣ್ಣಪ್ಪ (ಧಾರವಾಡ)–1. ಕಾಲ: 1ನಿ 56.23ಸೆ, ನಿಂಗಪ್ಪ (ಧಾರವಾಡ)–2, ಪ್ರಕಾಶ್ ಬಾಬು (ಧಾರವಾಡ)–3;10 ಸಾವಿರ ಮೀ ಓಟ: ಓಂಕಾರ್ (ಬೆಂಗಳೂರು)–1. ಕಾಲ: 29ನಿ 49.04ಸೆ), ವಿಜಯ್ ಎಸ್ (ಬೆಳಗಾವಿ)–2, ಕರಣ್ ಜಿ (ಬೆಂಗಳೂರು)–3; ಜಾವೆಲಿನ್ ಥ್ರೋ: ಯುವರಾರ್ ಲಮಾಣಿ (ಬಾಗಲಕೋಟೆ)–1. ದೂರ: 56.22ಮೀ, ಜೀವನ್ (ಬೆಂಗಳೂರು)–2, ನಿತಿನ್ ಕುಮಾರ್ (ತುಮಕೂರು)–3; ಸುದೀಪ್ (ಶಿವಮೊಗ್ಗ)–1. ಎತ್ತರ: 2.08 ಮೀ, ಸುನಿಲ್ ಬಿ (ಗದಗ)–2; ಲಾಂಗ್ ಜಂಪ್: ಸುನಾಲ್ ಸುವರ್ಣ (ಉಡುಪಿ)–ಅಂತರ: 6.93ಮೀ, ವಿಶಾಲ್ ಸಂಜೀವಪ್ಪ (ಯಾದಗಿರಿ)–2, ಲೋಹಿಯಾ (ಬೆಂಗಳೂರು ಗ್ರಾಮಾಂತರ)–3.

ಮಹಿಳೆಯರು: ನೊಯೆಲ್ ಅನಾ ಕೊರ್ನೆಲಿಯೊ (ಬೆಂಗಳೂರು)–1. ಕಾಲ: 12.03ಸೆ, ವರ್ಷಾ (ಬೆಂಗಳೂರು)–2, ಗ್ರೀಷ್ಮಾ (ಬೆಂಗಳೂರು)–3; 800 ಮೀ: ರೇಖಾ ಬಸಪ್ಪ ಪೈರೋಜಿ (ದಕ್ಷಿಣ ಕನ್ನಡ)–1. ಕಾಲ: 2ನಿ15.36 ಸೆ, ಮನು (ಬೆಂಗಳೂರು)–2, ಅನುಷಾ (ಉತ್ತರ ಕನ್ನಡ)–3; 10 ಸಾವಿರ ಮೀ: ಪ್ರಣಮ್ಯ ಎನ್ (ದಕ್ಷಿಣ ಕನ್ನಡ)–1. ಕಾಲ: 40ನಿ 35.09ಸೆ), ಯುವರಾಣಿ (ರಾಯಚೂರು)–2, ಹರ್ಷಿತಾ (ಮೈಸೂರು)–3; ಡಿಸ್ಕಸ್ ಥ್ರೋ: ಪ್ರಗ್ಯಾ ಗೋಯಲ್ (ಬೆಂಗಳೂರು)–1. ದೂರ: 27.71ಮೀ, ರೇವತಿ ಚಂದ್ರ (ಉಡುಪಿ)–2, ಮುಸ್ಕಾನ್ ಸುಬೇದಾರ್ (ಬಾಗಲಕೋಟೆ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.