ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಆರೋಗ್ಯ ತಪಾಸಣಾ ಶಿಬಿರ

Published : 13 ಸೆಪ್ಟೆಂಬರ್ 2024, 14:18 IST
Last Updated : 13 ಸೆಪ್ಟೆಂಬರ್ 2024, 14:18 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ಕುರಬಗಟ್ಟಿ ಗ್ರಾಮದಲ್ಲಿ ಈಚೆಗೆ ಇನ್ನರ್‌ವ್ಹೀಲ್ ಕ್ಲಬ್, ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮತ್ತು ರೋಟರಿ ಕ್ಲಬ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

200ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡರು. ರಕ್ತದೊತ್ತಡ, ದಂತ, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ, ಮಾರ್ಗದರ್ಶನ ಪಡೆದರು.

ಡಾ. ಎಂ.ಎಂ.ಜೋಶಿ ಶಿಬಿರ ಉದ್ಘಾಟಿಸಿದರು. ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಪ್ರಿಯದರ್ಶಿನಿ ಕೊಟ್ಟೂರಶೆಟ್ಟರ, ಪ್ರಮುಖರಾದ ಸಹನಾ ಪೈಕೋಟಿ, ಪ್ರಮೀಳಾ ಜೋಶಿ, ಪದ್ಮಾ ಸತ್ಯಮೂರ್ತಿ, ಸುಷ್ಮಾ ಹಿರೇಮಠ, ವಿಜಯಲಕ್ಷ್ಮಿ ಕಟ್ಟಿಮಠ, ವೀಣಾ ಹೆಗಡೆ, ಪ್ರೇಮಾ ಪಾಟೀಲ, ದೀಪಾ ಪಿಂಪಳೆ, ರೇಖಾ ಓದುಗೌಡರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ವಕ್ಕಂದ, ಡಾ. ಪ್ರಿಯಾಂಕಾ ಯಳಮಲಿ, ಡಾ. ಸುಧಾ ಹಳೆಮನಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT