ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ | ಚಿನ್ನದ ವ್ಯಾಪಾರಿ ಅಪಹರಣ ಯತ್ನ: ಬಂಧನ

Published 19 ಡಿಸೆಂಬರ್ 2023, 16:11 IST
Last Updated 19 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಪಟ್ಟಣದ ಚಿನ್ನದ ವ್ಯಾಪಾರಿ ಗರ್ವಿತ ರಾಜಪುರೋಹಿತ ಅವರನ್ನು ಡಿ.10ರಂದು ರಾತ್ರಿ 8 ಗಂಟೆ ಸುಮಾರಿಗೆ ಪಟ್ಟಣದ ತರಳುಬಾಳು ನಗರ 1ನೇ ಕ್ರಾಸ್ ಬಳಿ ಐವರು ವ್ಯಕ್ತಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿ ಅಪಹರಣಕ್ಕೆ ಪ್ರಯತ್ನಿಸಿ, ಪರಾರಿಯಾಗಿದ್ದಾರೆ.  

ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರಿನಲ್ಲಿ ಶೋಬಿತ ಪಿ. ಮಂಜುನಾಥ, ಜೇಮ್ಸ್, ಪ್ರಸನ್ನ, ಇವರನ್ನು ದಸ್ತಗಿರಿ ಮಾಡಿದ್ದು, ಪ್ರಮುಖ ಆರೋಪಿ ರಟ್ಟೀಹಳ್ಳಿ ಪಟ್ಟಣದ ರಾಜು ಪವಾರ ಇತನನ್ನು ಹಾವೇರಿ ತಾಲ್ಲೂಕು ಅಗಡಿಯಲ್ಲಿ ದಸ್ತಗಿರಿ ಮಾಡಿದ್ಧಾರೆ. 

ಆರೋಪಿತರು ಚಿನ್ನದ ವ್ಯಾಪಾರಿ ಗರ್ವಿತ ಅವರನ್ನು ಅಪಹರಿಸಿ ಬಿಡುಗಡೆಗೆ ಹಣಕ್ಕೆ ಬೇಡಿಕೆ ಇಡುವ ಚಿಂತನೆ ನಡೆಸಿದ್ದರು. ಅಪಹರಣಕಾರರಿಂದ ಕೃತ್ಯಕ್ಕೆ ಬಳಸಿದ ಕಾರು,  ಮೊಬೈಲ್, ಸೇರಿದಂತೆ ಒಟ್ಟು ₹1,75 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ‍್ಳಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ರಟ್ಟೀಹಳ‍್ಳಿ ಪೊಲೀಸರು ತಿಳಿಸಿದ್ದಾರೆ. 

ಪ್ರಕರಣ ಬೇಧಿಸಿದ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT