ಹುಬ್ಬಳ್ಳಿ: ‘ಹಿರಿಯ ನಾಗರಿಕರು ಘನತೆಯಿಂದ ಬದುಕಲು ಇನ್ನೂ ಹೋರಾಟ ಮಾಡುತ್ತಿರುವುದು ವಿಷಾದನೀಯ’ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶ ಪಿ.ಎಫ್.ದೊಡಮನಿ ವಿಷಾದಿಸಿದರು.

ನಗರದ ಸಿದ್ಧರೂಢಮಠದ ಹತ್ತಿಮತ್ತೂರು ಸಭಾ ಭವನದಲ್ಲಿ ಶನಿವಾರ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕ, ಹಿರಿಯ ನಾಗರಿಕರ ಸಬಲೀಕರಣ ಮತ್ತು ಅಂಗವಿಕಲರ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿರಿಯರು ಇಂತಹ ಕಾರ್ಯಕ್ರಮಗಳಿಗೆ ತಮ್ಮ ಜೊತೆ ಮಕ್ಕಳು, ಮೊಮ್ಮಕ್ಕಳನ್ನು ಕರೆದುಕೊಂಡು ಬರಬೇಕು. ಅಂದಾಗ ಮಾತ್ರ ಹಿರಿಯರ ಕಾನೂನುಗಳ ಬಗ್ಗೆ ತಿಳಿಯುತ್ತದೆ. ವಯಸ್ಸು ಆದಂತೆ ಅನೇಕ ಸಮಸ್ಯೆಗಳು ಹಿರಿಯರನ್ನು ಕಾಡುತ್ತಿವೆ. ಆದ್ದರಿಂದ ಜಾಗೃತಿ ಮತ್ತು ಜಾಗೂರಕತೆ ಅತ್ಯಂತ ಅವಶ್ಯ. ಆಸ್ತಿಯನ್ನು ಪಾರದರ್ಶಕವಾಗಿ ಕಾಪಾಡಿಕೊಳ್ಳುವುದು. ವ್ಯಾಜ್ಯಗಳು ಇಲ್ಲದಂತೆ ಉತ್ತಮ ಪರಿಸರವನ್ನು ಹಿರಿಯರು ರೂಪಿಸಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.

’ಮನುಷ್ಯನಿಗೆ ಸಂಬಂಧ ಹಾಗೂ ಮಾನವೀಯತೆ ಮುಖ್ಯ. ಮಕ್ಕಳಿಗೆ ನೈತಿಕತೆ ಹಾಗೂ ಮಾನವೀಯ ಸಂಬಂಧಗಳನ್ನು ಕಲಿಸಬೇಕಿದೆ. ಇಂದು ಹಣ ಗಳಿಸುವುದು, ಪ್ರತಿಷ್ಠೆಯೊಂದೇ ಮುಖ್ಯವಾಗಿದೆ. ಮಾನವೀಯ ಸಂಬಂಧಗಳು ಹಾಗೂ ಆತ್ಮಸಾಕ್ಷಿ ಕಡಿಮೆಯಾಗುತ್ತಿದೆ.
ನೀವು ಇರುವವರೆಗೂ ಆಸ್ತಿಯನ್ನು ಯಾರಿಗೂ ಕೊಡಬೇಡಿ. ಮೃತರಾದ ನಂತರ ನಿಮ್ಮ ವಾರಾಸುದಾರರಿಗೆ ಹೋಗಲಿದೆ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು. ನಿಮ್ಮ ಆಸ್ತಿಗಾದರೂ ನಿಮ್ಮನ್ನು ನೋಡಿಕೊಳ್ಳುತ್ತಾರೆ. ಇಂದಿನ ಪ್ರಕರಣಗಳ ಆಧಾರದ ಮೇಲೆ ಈ ಮಾತನ್ನು ಹೇಳುತ್ತಿದ್ದೇನೆ. ಹಿರಿಯ ನಾಗರಿಕರು ತಮ್ಮ ಮಕ್ಕಳಿಂದ ಜೀವನಾಂಶ ಕೇಳಬಹುದು. ತೀರಿಕೊಂಡ ನಂತರ ಅವರ ಆಸ್ತಿ ಯಾರಿಗೆ ಹೋಗುತ್ತದೆಯೋ ಅವರಿಗೆ ನೊಟಿಸ್ ಜಾರಿ ಮಾಡಿ ಕರೆಯಸಲಾಗುತ್ತದೆ‘ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಪಾಟೀಲ ಮಾತನಾಡಿ, ಹಿರಿಯ ನಾಗರಿಕರ ಕಾನೂನು ಜಾರಿಗೆ ಬಂದು ಅನೇಕ ವರ್ಷಗಳು ಸಂದಿವೆ. ಆದರೆ ಜಾಗೃತಿ ಕೊರತೆ ಇದೆ. ಆರಂಭದಲ್ಲಿ 165 ಸದಸ್ಯರು ಇದ್ದರು. ಈಗ 1.20 ಲಕ್ಷ ಸದಸ್ಯರನ್ನು ಸಂಘ ಹೊಂದಿದೆ ಎಂದರು.

ಹಿರಿಯ ನಾಗರಿಕರ ಇಲಾಖೆ ಕಲ್ಯಾಣ ಅಧಿಕಾರಿ ಸವಿತಾ ಕಾಳೆ ಮಾತನಾಡಿ, ಇಲಾಖೆಯಿಂದ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. 1090 ಸಹಾಯವಾಣಿ, ಇತ್ತೀಚಿನ ವರ್ಷಗಳಲ್ಲಿ ಆಸ್ತಿಗಾಗಿ ತೊಂದರೆ ಕೊಡುವ ಕೆಲಸಗಳು ಆಗುತ್ತಿವೆ. ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ನಿಮ್ಮ ಸಂಕಷ್ಟಕ್ಕೆ ನೆರವಾಗುತ್ತೇವೆ. ಹಗಲು ಯೋಗಕ್ಷೇಮ ಸೇರಿದಂತೆ ಹಲವು ಯೋಜನೆಗಳಿವೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳನ್ನು ಸನ್ಮಾರ್ಗ ಹಾಗೂ ಸಂಸ್ಕೃತಿ ನೀಡಿ ಬಳಸಿ. ಅನಿವಾರ್ಯ ಕಾರಣಗಳಿದ್ದರೆ ವೃದ್ದಾಶ್ರಮ ಸೇರಿಸಬೇಕು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧಾರೂಢಮಠದ ಅಧ್ಯಕ್ಷ ಚೆನ್ನವೀರ ಮುಂಗರವಾಡಿ ಮಾತನಾಡಿದರು.

ಬೈಲಹೊಂಗಲದ ಹಿರಿಯ ಮಹಿಳಾ ನಾಗರಿಕರು ಭಜನಾ ಪ್ರಸ್ತುತ ಪಡಿಸಿದರು. ಸಿದ್ಧಾರೂಢರ ಜೀವನ ಚರಿತ್ರೆ ಕುರಿತು ನೃತ್ಯ ಪ್ರದರ್ಶನ ನೀಡಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಡಾ.ಸ್ವಾಮಿ ಕಮಲ ಮನೋಹರ, ಸಂಘಟನೆಯ ಡಾ.ಲಿಂಗರಾಜ ಅಂಗಡಿ, ಡಾ.ಆರ್.ಕೆ.ಮಠದ, ಧರಣೇಂದ್ರ ಜವಳಿ, ಡಾ.ಸುನಂದಾ ಬೆನ್ನೂರು, ಡಿ.ಟಿ.ಪಾಟೀಲ, ಪಿ.ಪಿ.ಗಾಯಕವಾಡ ಮುಂತಾದವರು ಇದ್ದರು.

ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಘನತೆ ಹಾಗೂ ಗೌರವದಿಂದ ಬದುಕಲು ಹಕ್ಕಿದೆ. ಬಡವರು ದುರ್ಬಲರಿದ್ದಾರೆ. ಹೀಗಾಗಿ ಕಾನೂನು ಉಚಿತ ವಕೀಲರನ್ನು ನೇಮಿಸಲಾಗುತ್ತದೆ
ಪಿ.ಎಫ್.ದೊಡಮನಿ ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ ಪ್ರಾಧಿಕಾರ

ಐದು ಬೇಡಿಕೆ ಈಡೇರಿಕೆಗೆ ಮನವಿ

ಹಿರಿಯ ನಾಗರಿಕರ ಪ್ರಮುಖವಾದ ಐದು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರು ಮನವಿ ಮಾಡಿದರು. ಹಿರಿಯರನ್ನು ರಾಷ್ಟ್ರೀಯ ಸಂಪತ್ತು ಎಂಬ ಘೋಷಣೆ ಬಿಪಿಎಲ್ ಕಾರ್ಡ್ ಹೊಂದಿದ ಹಿರಿಯರಿಗೆ ಮಾಸಿಕ ₹10 ಸಾವಿರ ಪಿಂಚಣಿ ಪ್ರತ್ಯೇಕ ಸಚಿವಾಲಯ ಬಜೆಟ್ ಅಧಿಕಾರಿ ನೇಮಕ ದೇಶದಲ್ಲಿ ಏಕರೂಪ ಪಿಂಚಣಿ ವ್ಯವಸ್ಥೆ ಜಾರಿ ಹಾಗೂ ಆಯೋಗವನ್ನು ರಚನೆ ಮಾಡಿ ಅದಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.