ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನ‌ ಬ್ರೆಡ್‌ ಮಾತ್ರ ತಿಂದು ಬದುಕಿದ್ದೇವೆ ಅಮ್ಮಾ- ಮುಂಡರಗಿ ವಿದ್ಯಾರ್ಥಿನಿ

Last Updated 27 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬ್ರೆಡ್‌ ಮಾತ್ರ ತಿಂದು ಶನಿವಾರದ ದಿನ ಕಳೆದಿದ್ದೇವೆ ಅಮ್ಮಾ. ಹೊಟ್ಟೆನೋವು ತಡೆಯಲು ಆಗುತ್ತಿಲ್ಲ’

ಇದು ಉಕ್ರೇನ್‌ನ ಹಾರ್ಕಿವ್‌ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್‌ ಓದುತ್ತಿರುವ ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪುರ್‌ ಅವರು ತಮ್ಮ ತಾಯಿ ನೂರ್‌ಜಹಾನ್‌ ಮುಂದೆ ತೋಡಿಕೊಂಡ ನೋವು ಇದೆ.

ತಮ್ಮ ಮಗಳು ಭಾನುವಾರ ಬೆಳಿಗ್ಗೆ ವಿಡಿಯೊ ಕಾಲ್‌ ಮಾಡಿ ಮಾತನಾಡಿದ್ದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡ ನೂರ್‌ಜಹಾನ್‌ ಅವರು ’ಹಲವು ದಿನಗಳ ಹಿಂದೆ ಸಂಗ್ರಹಿಸಿಟ್ಟುಕೊಂಡಿದ್ದ ನೀರು ವಾಸನೆ ಬರುತ್ತಿದೆ. ಮೊದಲೇ ತಂದುಕೊಂಡಿದ್ದ ಬ್ರೆಡ್‌ ತಿಂದು ದಿನಗಳನ್ನು ದೂಡುತ್ತಿದ್ದೇನೆ. ಇದರಿಂದ ಬೇಸ್‌ಮೆಂಟ್‌ನಲ್ಲಿರುವ ಬಹಳಷ್ಟು ವಿದ್ಯಾರ್ಥಿಗಳು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ ಎಂದು ಅಳುತ್ತಿದ್ದಳು’ ಎಂದರು.

ಕೆಲವು ವಿದ್ಯಾರ್ಥಿಗಳು ಹಾರ್ಕಿವ್‌ನ ಮೆಟ್ರೊ ನಿಲ್ದಾಣ ಮತ್ತು ಇನ್ನೂ ಕೆಲವರು ಹಾಸ್ಟೆಲ್‌ನ ಬೇಸ್‌ಮೆಂಟ್‌ನಲ್ಲಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ತಾಯ್ನಾಡಿಗೆ ಬದುಕಿ ಬರುತ್ತೇವೆ ಎನ್ನುವ ಭರವಸೆಯೇ ಉಳಿಯುತ್ತಿಲ್ಲ ಎಂದು ಮಗಳು ನೋವಿನಿಂದ ಹೇಳಿದಳು ಎಂದು ನೂರ್‌ಜಹಾನ್‌ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT