ಕುಂದಗೋಳ: ಉತ್ತರ ಕರ್ನಾಟಕದಲ್ಲಿ ಭಕ್ತಿ, ದೈವಾರಾಧನೆಗೆ ಅನೇಕ ಸಂಪ್ರದಾಯ ಮೂಲಕ ಆಚರಿಸಲಾಗುತ್ತದೆ. ಅದರಲ್ಲಿ ವಿಶಿಷ್ಠವಾಗಿ ಕಾಣುವ ಅಕ್ಕಿಬೆಳೆ ಪೂಜೆಯೊಂದು ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಆಚರಿಸುವುದು ವಿಷೇಷವಾಗಿದೆ.

ಈ ಪೂಜೆಯ ತಯಾರಿಯೇ ವಿಶಿಷ್ಠವಾಗಿದೆ. ಶ್ರೀಶೈಲದ ಅರಣ್ಯ ಪ್ರದೇಶದಿಂದ ತಂದ ನಂದಿಕೋಲನ್ನು (ಬಿದಿರು) ಎತ್ತಿನ ಬಂಡಿಗಾಲಿಯ ಆಕಾರದಲ್ಲಿ ತಯಾರಿಸಿ ಅದಕ್ಕೆ ಅಕ್ಕಿ ಹಾಗೂ ಕಡಲೆ ಬೆಳೆಯನ್ನು ನೂಲುದಾರದಿಂದ ಸುತ್ತಿ ಪೂಜಿಸಲಾಗುತ್ತದೆ.

ಭೂಮಿಗೆ ಲಂಭವಾಗಿ ನಿಲ್ಲಿಸಿದ ಗಾಲಿಗೆ ಕೇವಲ ನೂಲಿನ ಸಹಾಯದಿಂದ ಅಕ್ಕಿ-ಬೇಳೆಗಳನ್ನು ಸುತ್ತಿದರೂ ಬೀಳದೆ ಇರುವುದು ಇಲ್ಲಿನ ಭಕ್ತರು ದೈವಭಕ್ತಿಯ ಪ್ರತೀಕ ಎಂದು ನಂಬುತ್ತಾರೆ. ಬೆತ್ತದ ಗಾಲಿಯ ಮಧ್ಯದಲ್ಲಿ ಸುಮಾರು 12 ಇಂಚಿನಷ್ಟು ಗೋಪುರ, ಸುತ್ತಲೂ 12 ಸಣ್ಣ ಗೋಪುರಗಳು ಸುಮಾರು 6 ಇಂಚಿನಷ್ಟಿರುತ್ತವೆ.

ಈ ಗೋಪುರಗಳಿಗೆ ಅಕ್ಕಿಯನ್ನು ನೂಲಿನ ಸಹಾಯದಿಂದ ಸುತ್ತಲಾಗುತ್ತದೆ. ಗೋಪುರಗಳ ಮಧ್ಯದ ಬೆತ್ತದ ಗಾಲಿಗೆ ಕಡಲೆ ಬೆಳೆ ಕಟ್ಟಲಾಗುತ್ತದೆ. ಈ ಗಾಲಿಯ ಸುತ್ತಲೂ ಚಕ್ರಾಕಾರದಲ್ಲಿ ವೀಳ್ಯದ ಎಲೆ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ.

ಹಿನ್ನಲೆ: ಗ್ರಾಮದ ಕಲ್ಲನಗೌಡ್ರ ಹಾಗೂ ಫಕೀರಗೌಡ್ರ ಮನೆತನದಿಂದ ಸುಳ್ಳದ ಕಲ್ಮೇಶ್ವರ ದೇವರಿಗೆ ಬೇಡಿಕೊಂಡು, ಶ್ರೀಶೈಲ ಮಲ್ಲಿ ಕಾರ್ಜುನನ ಪ್ರತಿಕವಾಗಿ ಪೂಜೆ ಪ್ರಾರಂಭವಾಗಿದ್ದು. ನೂರಾರು ವರ್ಷಗಳ ಇತಿಹಾಸದ ಹಿನ್ನೆಲೆಯುಳ್ಳದ್ದಾಗಿದೆ.

ಅನೇಕ ಗ್ರಾಮಗಳಿಂದ ಜನರು ಬಂದು ಇಲ್ಲಿ ಬೇಡಿಕೊಂಡು ಇಷ್ಟಾರ್ಥ ಈಡೇರಿದ್ದಕ್ಕೆ ಪ್ರತಿವರ್ಷ ಬಂದು ದರ್ಶನ ಪಡೆದು ಅಕ್ಕಿಬೆಳೆ ಪೂಜೆ ಸೇವೆ ಸಲ್ಲಿಸಿ ಪೂಜೆಸುತ್ತಿದ್ದಾರೆ. ಭಕ್ತರ ಹರಕೆಯ ಪೂಜೆಗಳು ಮಾರ್ಚ್ 11ರಂದು 12ರಂದು ಅಂತಿಮ ಪೂಜೆ ಜರುಗಲಿದೆ.

ರಾತ್ರಿ ಪೂರ್ತಿ ಭಕ್ತರು ದರ್ಶನ ಪಡೆವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.