ಬೆಳೆಗಾರರೇ ಸಂಘಟನಾತ್ಮಕವಾಗಿ ರಫ್ತು ಮಾಡಿರುವುದು ಸಕಾರಾತ್ಮಕ ನಡೆ. ಪ್ರಮಾಣೀಕರಣ ಸೇರಿದಂತೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುತ್ತಿದೆ
ಕಾಶಿನಾಥ ಭದ್ರಣ್ಣನವರ, ಉಪನಿರ್ದೇಶಕ ತೋಟಗಾರಿಕಾ ಇಲಾಖೆ
ಮಾವು ಬೆಳೆಗಾರರ ಬಳಗದ ಮೂಲಕ ಮಾವು ರಫ್ತು ಮಾಡಿದ್ದೇನೆ. ಇದೀಗ ಅಮೆರಿಕಕ್ಕೆ 3 ಟನ್ ಮಾವು ರಫ್ತು ಮಾಡಲು ತಯಾರಿ ನಡೆಸಿದ್ದೇನೆ
ಪ್ರಮೋದ್ ತುಕಾರಾಂ ಗಾಂವ್ಕರ್, ಮಾವು ಬೆಳೆಗಾರ ಕಲಕೇರಿ
‘ಪ್ಯಾಕಿಂಗ್‌ಹೌಸ್ ಅವಶ್ಯ’
‘2020ರಲ್ಲೇ ಮಾವು ರಫ್ತಿಗೆ ಯೋಜನೆ ರೂಪಿಸಲಾಗಿತ್ತು. ಈ ವರ್ಷ ಇಳುವರಿ ಕಡಿಮೆ ಆಗಿದ್ದರಿಂದ ಮುಂದೆ ದೊಡ್ಡ ಮಟ್ಟದಲ್ಲಿ ರಫ್ತು ಮಾಡುವ ಯೋಜನೆಯಿದೆ. ಸ್ಥಳೀಯ ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ಸಿಗಲಿದೆ. ಹಾಗಾಗಿ ಹೆಚ್ಚಿನ ರೈತರು ಇದಕ್ಕೆ ಕೈಜೋಡಿಸಬೇಕು’ ಎಂದು ರಾಜೇಂದ್ರ ಪೊದ್ದಾರ ಕೋರಿದರು. ‘ಮಾವು ಅಭಿವೃದ್ಧಿ ಮಂಡಳಿ ಅಡಿ ಪ್ಯಾಕಿಂಗ್‌ಹೌಸ್ ಶೀಘ್ರ ನಿರ್ಮಾಣಗೊಂಡು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇದರಿಂದ ಜಿಲ್ಲೆಯ ಆಪೋಸ ಮಾವಿಗೆ ಹೊಸ ಬ್ರ್ಯಾಂಡ್ ಸೃಷ್ಟಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.