ಧಾರವಾಡ: ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳ ವ್ಯಾಪಾರ ಜೋರಾಗಿದೆ. ಗ್ರಾಹಕರು ತರಹೇವಾರಿ ಮಾವು ಖರೀದಿಸಿ ರುಚಿ ಸವಿಯುತ್ತಿದ್ದಾರೆ. ಆಪೂಸ್ ಮಾವು ಹೆಚ್ಚು ಮಾರಾಟವಾಗುತ್ತಿದೆ.

ಆಪೂಸ್ ಮಾವು ಡಜನ್ಗೆ ₹350ರಿಂದ ₹500, ಕಲ್ಮಿ ₹350ರಿಂದ ₹400, ಸಿಂಧೂರ ₹400ರಿಂದ ₹450, ರಸಪೂರಿ ₹250ರಿಂದ ₹300, ಬಂಗನಪಲ್ಲಿ ₹350ರಿಂದ ₹400, ಮಲ್ಗೋವಾ ₹400ರಿಂದ ₹550, ಮಲ್ಲಿಕಾ ₹450ರಿಂದ ₹500ರವರೆಗೆ ದರ ಇದೆ. ತೋತಾಪುರಿ ಮಾವಿನಕಾಯಿ ಕೆ.ಜಿಗೆ ₹60ರಿಂದ ₹80ರವರೆಗೆ ದರ ಇದೆ. ಮಾರುಕಟ್ಟೆಯಲ್ಲಿ ಆಪೂಸ್ ಹಣ್ಣುಗಳು ಹೆಚ್ಚು ಇವೆ. ಸಿಂಧೂರ, ಕಲ್ಮಿ, ರಸಪೂರಿ, ಮಲ್ಲಿಕಾ ಹಣ್ಣುಗಳು ಹೆಚ್ಚಾಗಿ ಪೂರೈಕೆಯಾಗುತ್ತಿಲ್ಲ.

ರತ್ನಗಿರಿ, ಕೆಲಗೇರಿ, ಜೊಗೆಲ್ಲಾಪುರ, ತಡಸಿನಕೊಪ್ಪ, ತೇಗೂರ, ಕೋಟೂರ ಸಹಿತ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಪೂಸ್ ಮಾವು ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಮಾರಾಟಗಾರರು ಬೆಲೆ ನಿಗದಿಪಡಿಸಿದ್ದಾರೆ.

ಸುಭಾಷ ರಸ್ತೆ, ಮಾರುಕಟ್ಟೆ ಸಹಿತ ನಗರದ ಮುಖ್ಯರಸ್ತೆಗಳ ಬದಿಯಲ್ಲಿ ವ್ಯಾಪಾರಿಗಳು ಮಾವು ಮಾರಾಟದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಬುಟ್ಟಿಗಳಲ್ಲಿ ರಾಶಿ ರಾಶಿಯಾಗಿ ಹಣ್ಣುಗಳನ್ನು ಇಟ್ಟುಕೊಂಡು ಪ್ರಯಾಣಿಕರನ್ನು ಆಕರ್ಷಿಸಿ ಮಾರಾಟ ಮಾಡಲಾಗುತ್ತಿದೆ.
ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಜ್ಯೂಸ್ ಅಂಗಡಿಗಳಲ್ಲೂ ಮಾವಿನ ಜ್ಯೂಸ್ಗೆ ಬೇಡಿಕೆ ಹೆಚ್ಚಾಗಿದೆ.

‘ಈ ವರ್ಷ ಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕಳೆದ ವರ್ಷ ಅತಿಯಾದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಮರಗಳೂ ಜನವರಿ ಕಳೆದರೂ ಹೂವು ಬಿಟ್ಟಿರಲಿಲ್ಲ. ಇದೇ ಸಮಯಕ್ಕೆ ಮತ್ತೊಮ್ಮೆ ಚಿಗುರೊಡೆದಿತ್ತು. ಹೂವು ಬಿಡುವುದು ತಡವಾಗಿ, ಕಾಯಿ ಕಟ್ಟುವುದು ನಿಧಾನವಾಗಿತ್ತು. ಆದ್ದರಿಂದ ಮಾರುಕಟ್ಟೆಗೆ ಹಣ್ಣು ಬರುವುದು ತಡವಾಗಿದೆ. ಬೆಲೆ ಸ್ವಲ್ಪ ದುಬಾರಿ ಇದೆ. ಎರಡು ವಾರ ಕಳೆದರೆ ಸ್ಥಳೀಯವಾಗಿ ಹಾಗೂ ಹೊರಗಿನಿಂದ ಇನ್ನೂ ಹೆಚ್ಚು ಪ್ರಮಾಣದಲ್ಲಿ ಹಣ್ಣು ಪೂರೈಕೆಯಾಗುತ್ತದೆ. ಆಗ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಹಣ್ಣಿನ ವ್ಯಾಪಾರಿ ಈಶ್ವರ ಹತ್ತಿಕಟ್ಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.