ಹುಬ್ಬಳ್ಳಿ: ‘ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಪಾಲಿಕೆ ಅನುದಾನ ಮತ್ತು ಎಸ್ಎಫ್ಸಿ ಅನುದಾನದಡಿ ಕೊಡಮಾಡುವ ಹೊಲಿಗೆಯಂತ್ರಗಳನ್ನು ಫಲಾನುಭವಿಗಳಿಗೆ ಸೋಮವಾರ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕ ಆಯುಕ್ತ ರುದ್ರೇಶ ಘಾಳಿ, ವಲಯಾಧಿಕಾರಿ ಜಗದೀಶ ದೊಡ್ಡಮನಿ, ಪಾಲಿಕೆ ಸದಸ್ಯ ಶ್ರೀನಿವಾಸ ಬೆಳದಡಿ, ಮುಖಂಡರಾದ ಸುಭಾನಿ ಮಲ್ಲಾಡ, ಬಿ.ಬಿ. ಕೆಂಪಣ್ಣವರ, ಸಿದ್ದಪ್ಪ ಸಿರವಾರ, ಮಂಜುನಾಥ ನಾಯಕಲ್, ಮಹೆಮೂದ ಕೋಳೂರ, ಹನುಮಂತಪ್ಪ ದೊಡ್ಡಮನಿ, ಪವನ ಬಿಜವಾಡ, ನಾಗರಾಜ ದೊಡ್ಡಮನಿ, ಸುಭಾಷ ಗುಡಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.