ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಹುಬ್ಬಳ್ಳಿ: ಪ್ರಜಾವಾಣಿ ಕಚೇರಿ ಎದುರು ಪತ್ರಿಕಾ ವಿತರಕರ ದಿನಾಚರಣೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಿಕಾ ವಿತರಕರ ದಿನದ ಅಂಗವಾಗಿ ಪ್ರಜಾವಾಣಿ ಕಚೇರಿ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಹುಬ್ಬಳ್ಳಿ: ಕೋವಿಡ್‌ ಭೀತಿಯ ಕಷ್ಟದ ಕಾಲದಲ್ಲಿಯೂ ವಾರಿಯರ್‌ಗಳಾದ ಕರ್ತವ್ಯ ನಿಭಾಯಿಸಿದ ಪತ್ರಿಕಾ ವಿತರಕರ ಮುಂಜಾವು ಶುಕ್ರವಾರ ಎಂದಿನಂತಿರಲಿಲ್ಲ. ಮನೆಮನೆಗಳಿಗೆ ಹೋಗಿ ಪತ್ರಿಕೆ ಹಂಚಿ ಬಂದ ಅವರಲ್ಲಿ ಸಂಭ್ರಮ ಮನೆ ಮಾಡಿತ್ತು. ಪತ್ರಿಕಾ ವಿತರಕರ ದಿನದ ಅಂಗವಾಗಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಹುಬ್ಬಳ್ಳಿಯ ಪ್ರಜಾವಾಣಿ ಕಚೇರಿ ಎದುರು ಸೇರಿದ ಪತ್ರಿಕಾ ವಿತರಕರು ಕೇಕ್‌ ಕತ್ತರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಖುಷಿ ಪಟ್ಟರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ವಿತರಕರಿಗೆ ಹೂಗುಚ್ಛ ನೀಡಿ ಸಿಹಿ ಹಂಚಲಾಯಿತು. ವಿದ್ಯಾನಗರ, ಕೊಪ್ಪಿಕರ್‌ ರೋಡ್‌, ಹಳೇ ಹುಬ್ಬಳ್ಳಿ ಮತ್ತು ಗೋಕುಲ ರಸ್ತೆಯಲ್ಲಿ ಪತ್ರಿಕಾ ವಿತರಕರ ದಿನದ ಸಡಗರ ಕಂಡು ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು