ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳ್ನಾವರ: ಸರ್ಕಾರಿ ಶಾಲಾ ಕಟ್ಟಡಕ್ಕೆ ಬಣ್ಣದ ಮೆರುಗು

Last Updated 5 ಜನವರಿ 2022, 14:30 IST
ಅಕ್ಷರ ಗಾತ್ರ

ಅಳ್ನಾವರ: ಸರ್ಕಾರಿ ಶಾಲೆಯಲ್ಲಿ ಮಕ್ಕಳು ಓದಬೇಕು. ಈ ಶಾಲೆಯಲ್ಲಿ ಸುಂದರ ವಾತಾವರಣ ನಿರ್ಮಾಣ ಆಗಬೇಕು. ಎಲ್ಲವೂ ಸರ್ಕಾರದಿಂದ ಆಗಲಿ ಎಂದು ಸಾರ್ವಜನಿಕರು ಭಾವಿಸಬಾರದು ಎಂದು ಬೆಣಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂದೀಪ ಪಾಟೀಲ ಹೇಳಿದರು.

ಮೋದಿಜಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ಇಲ್ಲಿನ ಸರ್ಕಾರಿ ಕನ್ನಡ ಮಾದರಿ ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳು ಸ್ವಚ್ಛ ಹಾಗೂ ಸುಂದರವಾಗಿರಬೇಕು ಎಂದರು.

ಬಳಗವು ಹಲವು ತಿಂಗಳಿಂದ ಈ ಅಭಿಯಾನ ನಡೆಸುತ್ತಿದೆ. ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಜನರು ದೇಣಿಗೆ ನೀಡಿ ಸಹಕರಿಸಿದ್ದಾರೆ. ಅಳ್ನಾವರ ಹಾಗೂ ಸುತ್ತಲಿನ ಸರ್ಕಾರಿ ಶಾಲೆ ಹಾಗೂ ಹಳೆಯ ದೇವಸ್ಥಾನಗಳ ಪುನರುಜ್ಜೀವನದ ಗುರಿ ಹೊಂದಲಾಗಿದೆ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಳಾ ರವಳಪ್ಪನವರಅಭಿಯಾನಕ್ಕೆ ಚಾಲನೆ ನೀಡಿದರು.

ರಮೇಶ ಕುನ್ನೂರಕರ, ಪರಶುರಾಮ ಬೇಕನೇಕರ, ಪರಮೇಶ್ವರ ತೇಗೂರ, ಎಸ್‌ಡಿಎಂಸಿ ಅಧ್ಯಕ್ಷ ಖಲೀಲಅಹ್ಮದ್ ಸನದಿ, ಉಪಾಧ್ಯಕ್ಷೆ ಗೌರಮ್ಮ ಅಂಚಿ, ಮುಖ್ಯ ಶಿಕ್ಷಕಿ ಆಶಾಬಿ ಹವಾಲ್ದಾರ್, ಮೋಹನ ಪಟೇಲ, ಪರಶುರಾಮ ಪಾಲಕರ, ವೆಂಕಟೇಶ ಪವಾರ, ಯಲ್ಲಾರಿ ಹುಬ್ಳೀಕರ, ಸತೀಶ ಹಿರೇಮಠ, ಆನಂತ ರವಳಪ್ಪವನರ, ಸುರೇಶ ಜಾಧವ, ಮಂಜುಳಾ ಅರ್ಕಾಚಾರಿ, ಪುಷ್ಪಾ ಸಾಗರೇಕರ, ರೇಖಾ ಸಾವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT