ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ಕೋರೆಗಾಂವ್ ಶೌರ್ಯ ಯೋಧರ ಸ್ಮರಿಸಿ: ಶಿವಣ್ಣ ಚಿಕ್ಕಣ್ಣವರ

Published 2 ಜನವರಿ 2024, 6:40 IST
Last Updated 2 ಜನವರಿ 2024, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೋರೆಗಾಂವ್‌ ಯುದ್ಧದಲ್ಲಿ ಪೇಶ್ವೆಯರ ವಿರುದ್ಧ ಹೋರಾಡಿದ ದಲಿತರ ಶೌರ್ಯ ಮರೆಯುವಂತಿಲ್ಲ. ನಾವೆಲ್ಲ ಅವರನ್ನು ಸದಾ ಸ್ಮರಿಸಬೇಕು’ ಎಂದು ವಕೀಲ ಶಿವಣ್ಣ ಚಿಕ್ಕಣ್ಣವರ ಹೇಳಿದರು.

ಕರ್ನಾಟಕ ದಲಿತ ವಿಮೋಚನಾ ಸಮಿತಿ ರಾಜ್ಯ ಘಟಕ ವತಿಯಿಂದ ನಗರದ ಹೊರವಲಯದ ಗಬ್ಬೂರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್‌ ಶೌರ್ಯ ಯೋಧರ ದಿನದಲ್ಲಿ ಅವರು ಮಾತನಾಡಿದರು.

ಕ್ರಾಂತಿಗೀತೆ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಗಬ್ಬೂರು ವೃತ್ತದಿಂದ ರೈಲ್ವೆ ನಿಲ್ದಾಣ ರಸ್ತೆಯ ಪ್ರಧಾನ ಅಂಚೆ ಕಚೇರಿ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ನಡೆಯಿತು. ಈ ವೇಳೆ, ಯುದ್ಧದಲ್ಲಿ ಮಡಿದ ವೀರಯೋಧರ ಸ್ತೂಪದ ರೂಪಕ ಗಮನ ಸೆಳೆಯಿತು.

ಕೆಂಚಪ್ಪ ಮಲ್ಲಣ್ಣವರ ಅಧ್ಯಕ್ಷತೆ ವಹಿಸಿದ್ದರು. ವಕೀಲ ಮೇಹಂತಕುಮಾರ ಹಾವರಗಿ, ಮಕ್ತುಮಸಾಬ ನದಾಫ, ನಾಗರಾಜ ಮೊರಬ, ಸಿದ್ಧಾರ್ಥ ಮಲ್ಲಣ್ಣವರ, ಅನಿಲ ಗೋನಾಳ, ಸುರೇಶ ಶಿವಣ್ಣವರ, ಉಮೇಶ ಮಾದರ, ರಾಘವೇಂದ್ರ ರಾಮಗಿರಿ, ರಮೇಶ ಮಾದರ, ಕರಿಯಪ್ಪ ಹರಿಜನ, ಮಂಜುನಾಥ ಬಾಳಪ್ಪನವರ, ಸುರೇಶ ಡಿ., ಪರಶುರಾಮ, ಆಂಜನೇಯ ಮೇಟಿ, ಸುರೇಶ ಮುದಕಣ್ಣವರ, ಮರಿಯಪ್ಪ,‌ ವಿನಾಯಕ ಮಲ್ನಾಡ, ಮೈಲಾರಪ್ಪ, ಶ್ರೀಧರ ಕಂದಗಲ್, ಸುರೇಶ ಖಾನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT