ಹುಬ್ಬಳ್ಳಿ: ‘ನಿಯಮಾವಳಿ ಪ್ರಕಾರ ಸರ್ಕಾರದ ಅಧೀನದಲ್ಲಿರುವ ಯಾವುದಾದರೊಂದು ಸಂಘ–ಸಂಸ್ಥೆಗಳಿಗೆ ಮಾತ್ರ ಅಧ್ಯಕ್ಷರಾಗಬಹುದು. ಆದರೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಚಂದ್ರಕಾಂತ ಬೆಲ್ಲದ ಅವರು, ಹಾಲಬಾವಿ ಟ್ರಸ್ಟ್ ಮತ್ತು ಬಸವರಾಜ ರಾಜಗುರು ಟ್ರಸ್ಟ್ಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಂಜೀವ ದುಮ್ಮಕನಾಳ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಧಾರವಾಡದಲ್ಲಿ 30ಕ್ಕೂ ಹೆಚ್ಚು ಮಳಿಗೆಗಳು ಇವೆ. ಆ ಮಳಿಗೆಗಳು ಸಂಘದ ಸದಸ್ಯರ ಹೆಸರಲ್ಲಿ ಇವೆ. ಒಂದೊಂದು ಮಳಿಗೆಯನ್ನು ₹20 ಸಾವಿರದಿಂದ ₹30 ಸಾವಿರಕ್ಕೆ ಬಾಡಿಗೆ ನೀಡಿ, ಸಂಘಕ್ಕೆ ₹2 ಸಾವಿರ, ₹3 ಸಾವಿರ ಮಾತ್ರ ಪಾವತಿಸಲಾಗುತ್ತದೆ. 500ಕ್ಕೂ ಹೆಚ್ಚು ದತ್ತಿ ನಿಧಿಗಳಿದ್ದು, ಪ್ರತಿದಿನವೂ ಕಾರ್ಯಕ್ರಮ ನಡೆಯುತ್ತವೆ. ಕೆಲವರು ಇದನ್ನು ಲಾಭದಾಯಕ ಹುದ್ದೆಯನ್ನಾಗಿ ಮಾಡಿಕೊಂಡಿದ್ದಾರೆ‘ ಎಂದು ಆರೋಪಿಸಿದರು.

ಸಂಘದ 9,014 ಮತದಾರರಿದ್ದು, ಹುಬ್ಬಳ್ಳಿಯಲ್ಲಿ ಕೇವಲ 300 ಮಂದಿ ಇದ್ದಾರೆ. ರಾಜ್ಯದಾದ್ಯಂತ ಸದಸ್ಯರನ್ನು ನೋಂದಣಿ ಮಾಡಿ, ಸಂಘದ ಅಭಿವೃದ್ಧಿಗೆ ಶ್ರಮಿಸುವ ಇಚ್ಛೆ ಹೊಂದಿದ್ದೇನೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳಿದರು.

ಸಂಜೀವ ಬೆಳಗೆರೆ, ಶಿವು ರೆಡ್ಡಿ, ರಘು ಬಳ್ಳಾರಿ, ಅಖಿಲಾ ತಿವಾರಿ, ಜಾಕೀರ ಹುಸೇನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.