ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಡಾರ ಹೊನ್ನಾಟದ ಸಡಗರದಲ್ಲಿ ಮಿಂದೆದ್ದ ಶಿರೂರು ಜನತೆ

Published 21 ಏಪ್ರಿಲ್ 2024, 15:25 IST
Last Updated 21 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ನವಲಗುಂದ: ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗ್ರಾಮದೇವತೆಯ ದೇವಸ್ಥಾನ ಉದ್ಘಾಟನೆ ಹಾಗೂ ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಭಕ್ತರ ಮಹಾಪೂರವೇ ಹರಿದು ಬಂದು ದೇವಿಯ ಮೂರ್ತಿ ಮೆರವಣಿಗೆಯಲ್ಲಿ ಭಂಡಾರದ ಹೊನ್ನಾಟ ಮಿಂದೆದ್ದ ಮೆರವಣಿಗೆಯನ್ನು ಭಕ್ತರು ಅದ್ದೂರಿಯಾಗಿ ಸಂಭ್ರಮಿಸಿದರು.

ಒಂಬತ್ತು ದಿನಗಳ ಕಾಲ ವಿನೂತನ ಹಾಗೂ ವಿಭಿನ್ನ ರೀತಿಯಲ್ಲಿ ದೇವಿಯ ಆಚರಣೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಭಂಡಾರದ ಹೊನ್ನಾಟದಲ್ಲಿ ಯಾವುದೇ ಭೇದಭಾವ ಇಲ್ಲದೇ ಪರಸ್ಪರ ಭಂಡಾರ ಎರಚುವ ಮೂಲಕ ಐದನೇ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದರು.

ಮಹಿಳೆಯರು, ಮಕ್ಕಳು ಪರಸ್ಪರ ಸಂಪ್ರದಾಯಿಕ ಆಟಗಳನ್ನು ಆಡುವ ಮೂಲಕ ಮೆರವಣಿಗೆಗೆ ಹೊಸ ಮೆರುಗು ತಂದರು. ಇನ್ನೂ ಯುವಕರ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಯುವಕರು ಇಂತಹ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಸಂಭ್ರಮಿಸಿರುವುದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಇನ್ನು ಯಾವುದೇ ಜಾತಿ ಮತಗಳ ಭೇದ ಭಾವವಿಲ್ಲದೇ ಭಂಡಾರದ ಹೊನ್ನಾಟದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ, ಪುನಸ್ಕಾರಗಳ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮೆರವಣಿಗೆಯಲ್ಲಿ ಭಂಡಾರದ ಹೊನ್ನಾಟದ ಸಂಭ್ರಮದಲ್ಲಿ ಭಕ್ತರು
ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮೆರವಣಿಗೆಯಲ್ಲಿ ಭಂಡಾರದ ಹೊನ್ನಾಟದ ಸಂಭ್ರಮದಲ್ಲಿ ಭಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT