ಧಾರವಾಡ: ಆರ್ಸಿಎಚ್ ಪೋರ್ಟಲ್ನಲ್ಲಿ 2024–25ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 34 ಬಾಲಗರ್ಭಿಣಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪ್ರೇಮ ಪ್ರಕರಣಗಳು ಹೆಚ್ಚಿವೆ.

ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚು. 9 ಮತ್ತು 10ನೇ ತರಗತಿ ಹಂತದಲ್ಲಿ ಶಾಲೆ ತೊರೆದವರು ಜಾಸ್ತಿ ಇದ್ಧಾರೆ.

ಅವಳಿನಗರದಲ್ಲಿ 2023–24ರಲ್ಲಿ 40 ಹಾಗೂ 2024–25ರಲ್ಲಿ 14 ಪ್ರೇಮ ಪ್ರಕರಣಗಳು ದಾಖಲಾಗಿವೆ. ‘ಪೊಕ್ಸೊ’ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ), ಪ್ರೇಮ, ಮನೆಯವರ ಒತ್ತಡ ಮೊದಲಾದ ಪ್ರಕರಣಗಳು ಇವೆ.

ಆರ್ಸಿಎಚ್ ಪೋರ್ಟಲ್ನಲ್ಲಿ 2023–24ರಲ್ಲಿ 111 ಹಾಗೂ 2024–25ನೇ ಸಾಲಿನಲ್ಲಿ 34 ಪ್ರಕರಣ ದಾಖಲಾಗಿವೆ. ಈ ಪ್ರಕರಣಗಳಲ್ಲಿ 2023–24ರಲ್ಲಿ 12 ಹಾಗೂ 2024–25ರಲ್ಲಿ 13ಎಫ್ಐಆರ್ ದಾಖಲಾಗಿವೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆರ್ಸಿಎಚ್ ಪೋರ್ಟಲ್ನಲ್ಲಿ 2023–24ರಲ್ಲಿ 21 ಹಾಗೂ 2024–25ರಲ್ಲಿ 8 ಪ್ರಕರಣಗಳು 18 ವರ್ಷ ತುಂಬಿರುವ ಪ್ರಕರಣಗಳೂ ಇವೆ. 18 ವರ್ಷ ತುಂಬಿದ್ದರೆ ಅಂಥ ಪ್ರಕರಣ ಪರಿಗಣನೆಗೆ ಬರುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಹುಲಿಗೆಮ್ಮ ಎಚ್. ಕುಕನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲ ಗರ್ಭಿಣಿ ಪ್ರಕರಣಗಳ ತಡೆ ನಿಟ್ಟಿನಲ್ಲಿ ಗ್ರಾಮಗಳು ಶಾಲೆ ಕಾಲೇಜಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ‘ಸಖಿ’ ಕೇಂದ್ರದ ಮೂಲಕ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ
– ಹುಲಿಗೆಮ್ಮ ಎಚ್. ಕುಕನೂರ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.