ಭಾನುವಾರ, ಜನವರಿ 23, 2022
27 °C

ರೈಲು ಸಂಚಾರ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜೋಡಿ ಮಾರ್ಗ ಅಳವಡಿಕೆ ಕಾರಣಕ್ಕಾಗಿ ರದ್ದಾಗಿದ್ದ ಕೆಲವು ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಜ. 11, 17 ಮತ್ತು 22ರಂದು ಕೆಎಸ್‌ಆರ್‌ ಬೆಂಗಳೂರು–ಧಾರವಾಡ ನಡುವೆ ಸಂಚರಿಸುವ ಸೂಪರ್‌ಫಾಸ್ಟ್‌ ಇಂಟರ್‌ಸಿಟಿ ರೈಲು, 9, 12, 18 ಹಾಗೂ 23ರಂದು ಧಾರವಾಡದಿಂದ ಇದೇ ರೈಲಿನ ಸಂಚಾರ ಆರಂಭವಾಗಲಿದೆ.

ಹೊಸಪೇಟೆ–ಕೆಎಸ್‌ಆರ್‌ ಬೆಂಗಳೂರು ನಡುವೆ ಸಂಚರಿಸುವ ಪ್ಯಾಸೆಂಜರ್‌ ವಿಶೇಷ ರೈಲಿನ ಸಂಚಾರ ಜ. 11ರಂದು, ಬೆಂಗಳೂರಿನಿಂದ ಈ ರೈಲನ್ನು ಜ. 11ರಂದು, ವಾಸ್ಕೋಡಗಾಮ–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಜ. 7, 10, 16 ಮತ್ತು 21ರಂದು ಮೈಸೂರಿನಿಂದ ಪುನರಾರಂಭವಾಗಲಿದೆ. ಜ. 8, 11, 17, ಮತ್ತು 22ರಂದು ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು ಮೈಸೂರಿನಿಂದ ಮತ್ತೆ ಆರಂಭವಾಗಲಿದೆ.

ರದ್ದು: ಬೆಳಗಾವಿ–ಶೇಡಬಾಳ ನಡುವೆ ನಿತ್ಯ ಸಂಚರಿಸುವ ವಿಶೇಷ ರೈಲಿನ ಸಂಚಾರವನ್ನು ಜ. 7ರಂದು ಎರಡೂ ಮಾರ್ಗದಿಂದ ರದ್ದುಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು