ಶುಕ್ರವಾರ, ಮೇ 14, 2021
32 °C

ಕೆಎಸ್‌ಸಿಎ ಎರಡನೇ ಡಿವಿಷನ್‌ ಟೂರ್ನಿ: ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆಲ್‌ರೌಂಡ್ ಪ್ರದರ್ಶನ ತೋರಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ’ಬಿ‘ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 26 ರನ್‌ಗಳ ಗೆಲುವು ಸಾಧಿಸಿತು.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಚ್‌ಸಿಎ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 277 ರನ್‌ ಗಳಿಸಿತು. ಆದಿತ್ಯ ಎಚ್‌.ಎನ್‌. (99) ಉತ್ತಮ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ಇದಕ್ಕುತ್ತರವಾಗಿ ಎದುರಾಳಿ ಗದುಗಿನ ಜನೋಪಂತರ್‌ ಕ್ರಿಕೆಟ್‌ ಅಕಾಡೆಮಿ 251 ರನ್‌ ಗಳಿಸಿ ಗೆಲುವಿನ ಸನಿಹ ಬಂದು ಆಲೌಟ್‌ ಆಯಿತು.

ಮತ್ತೊಂದು ಪಂದ್ಯದಲ್ಲಿ ಗದಗ ಸ್ಪೋರ್ಟ್ಸ್ ಅಕಾಡೆಮಿ (ಎಸ್‌ಎಜಿ) ತಂಡ 38.4 ಓವರ್‌ಗಳಲ್ಲಿ 216 ರನ್‌ ಕಲೆಹಾಕಿತು. ಎದುರಾಳಿ ಭಟ್ಕಳ ಸ್ಪೋರ್ಟ್ಸ್‌ ತಂಡ 23.2 ಓವರ್‌ಗಳಲ್ಲಿ 96 ರನ್ ಗಳಿಸಲಷ್ಟೇ ಶಕ್ತವಾಯಿತು. ಎಸ್‌ಎಜಿ ತಂಡದ ಶಿವರಾಜ ಕೆ. ಮೂರು, ಅಸ್ಲಾಮ್‌ ಎಂ. ನಾಲ್ಕು ಮತ್ತು ಸಮೀರ್ ಜಿ. ಎರಡು ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಡಿಕೆ ತಂಡಕ್ಕೆ ಜಯ: ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಎರಡು ವಿಕೆಟ್‌ಗಳ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಸ್ಪೋರ್ಟ್ಸ್ ಕ್ಲಬ್‌ 47.1 ಓವರ್‌ಗಳಲ್ಲಿ 205 ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿಯನ್ನು ಬಿಡಿಕೆ ತಂಡ ಶತಕ್ ಗುಂಜಾಳ (83) ಉತ್ತಮ ಬ್ಯಾಟಿಂಗ್ ಬಲದಿಂದ ಮೂರು ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು