ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ವಿವಿಧೆಡೆ ವಿವೇಕಾನಂದರ ಜಯಂತಿ

Last Updated 12 ಜನವರಿ 2021, 16:29 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಸ್ವಾಮಿ ವಿವೇಕಾನಂದರ ದೇಶಪ್ರೇಮ ಆಗಾಧವಾದದು. ನುಡಿದಂತೆ ನಡೆದ ಮಹಾನ್ ಸಂತ ಅವರು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲ್ಲೂಕುಕಾನೂನು ಸೇವಾಸಮಿತಿ ಅಧ್ಯಕ್ಷ ರವೀಂದ್ರ ಡಿ.ಆರಿ ಬಣ್ಣಿಸಿದರು.

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ತಾಲ್ಲೂಕುಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಬಿವಿಬಿ ಕಾಲೇಜಿನಲ್ಲಿ ನಡೆದಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ‘ಇಂದಿನ ಯುವಕರು ದೇಶದ ಉನ್ನತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಕೆಲಸ ಅರಿಸಿ ವಿದೇಶಗಳಿಗೆ ಹೋಗುತ್ತಿದ್ದಾರೆ.ಇದರ ಬದಲು ದೇಶಪ್ರೇಮ ರೂಢಿಸಿಕೊಂಡು ಇಲ್ಲಿಯೇ ಕೆಲಸ ಮಾಡಬೇಕು’ ಎಂದರು.

ಬಯೋಟೆಕ್ ವಿಭಾಗದ ಮುಖ್ಯಸ್ಥ ಡಾ. ಸಂಜಯ ಗೊಠಬಾಗಿ, ವಕೀಲ ಬಿ.ವಿ ಕೋರಿಮಠ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಇದ್ದರು.ವಿದ್ಯಾರ್ಥಿ ಪ್ರಜ್ವಲ್ ಶೆಟ್ಟಿ ನಿರೂಪಿಸಿದರೆ, ವಿದ್ಯಾರ್ಥಿನಿ ಪಾಲ್ಗುಣಿ ಪ್ರಾರ್ಥಿಸಿದರು.

ಘಂಟಿಕೇರಿಸರ್ಕಾರಿ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿಚಿಂತಕ ಕೃಷ್ಣಮೂರ್ತಿ ಕುಲಕರ್ಣಿ, ವಾರ್ಡನ್‌ಡಾ. ಪ್ರಲ್ಹಾದ ಗೆಜ್ಜಿ,ಕ.ಚು.ಸಾ.ಪ. ಸಂಘಟನೆ ಚನ್ನಬಸಪ್ಪ ಧಾರವಾಡಶೆಟ್ರು, ಅನಂತ ಕುಲಕರ್ಣಿ, ಹಿರಿಯರಾದ ಅಶೋಕ, ಸಿದ್ದೇಶ್ವರ ಹಿರೇಮಠ, ಪದ್ಮಜಾ ಜಯತೀರ್ಥ ಉಮರ್ಜಿ, ಎಸ್.ಐ.ನೇಕಾರ, ರಾಹುಲ್ ಪತ್ತಾರ್, ಅಕ್ಷತಾ ಅಶೋಕ, ಸ್ತುತಿ ಧಿರೇಂದ್ರ ಇದ್ದರು.

ನಗರದ ಡಾ.ಆರ್.ಬಿ.ಪಾಟೀಲ ಮಹೇಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಪ್ರಾಸ್ತಾವಿಕವಾಗಿ ಪ್ರೊ. ಐ.ಎಸ್. ಹಿರೇಮಠ ಮಾತನಾಡಿ ವಿವೇಕಾನಂದರ ಜನನ, ಬಾಲ್ಯದ ಬಗ್ಗೆ ತಿಳಿಸಿಕೊಟ್ಟರು. ಪ್ರೊ.ಪೂರ್ಣಾನಂದ ಮಳಲಿ, ಪ್ರಾಚಾರ್ಯ ರಾಮಮೋಹನ್ ಎಚ್.ಕೆ. ಪ್ರೊ. ಐ.ಎಸ್. ಹಿರೇಮಠ, ಉಪ ಪ್ರಾಚಾರ್ಯ ರಮೇಶ ಹೊಂಬಾಳೆ ಇದ್ದರು.

ಜೆ.ಕೆ. ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿಶಿಕ್ಷಕಿ ನವನೀತಾ ಹಿರೇಮಠ ಸ್ವಾಮಿ ವಿವೇಕಾನಂದರ ವೇಷದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.ಶಿಕ್ಷಕಿ ನೈನಾ ದೊಡಮನಿ, ಮುಖ್ಯ ಶಿಕ್ಷಕಿ ಸ್ಮಿತಾವರ್ಣೇಕರ,ಜೆ.ಕೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷಜಗದೀಶ ಕಲ್ಯಾಣಶೆಟ್ಟರ ಇದ್ದರು.

ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದಪ್ರಾಚಾರ್ಯ ಡಾ. ಎಸ್.ಬಿ.ಲಕ್ಕನಗೌಡರ ‘ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವಿವೇಕಾನಂದರ ಆದರ್ಶಗಳು ಸ್ಫೂರ್ತಿಯಾಗಿವೆ’ ಎಂದರು. ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT