ಗದಗ: ತೋಂಟದಾರ್ಯ ಮಠದ ಲಿಂ. ಸಿದ್ಧಲಿಂಗ ಸ್ವಾಮೀಜಿ ಹಾಗೂ ಇಂದಿನ ಪೀಠಾಧಿಪತಿ ಸಿದ್ಧರಾಮ ಸ್ವಾಮೀಜಿ ವಿರುದ್ಧ ಅಪಮಾನಕರ ಹೇಳಿಕೆ ನೀಡುತ್ತಾ; ಅಪಪ್ರಚಾರ ಮಾಡಿ ಮಠದ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನವರ ಹಾಗೂ ಸಹಚರರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತೋಂಟದಾರ್ಯ ಮಠದ ಭಕ್ತರು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರಿಗೆ ಮನವಿ ಸಲ್ಲಿಸಿದರು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಧನೇಶ ದೇಸಾಯಿ ಮಾತನಾಡಿ, ‘ಗದುಗಿನ ತೋಂಟದಾರ್ಯ ಮಠ ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರ. ಭಾವೈಕ್ಯದ ಕ್ಷೇತ್ರ. ಇಂತಹ ಮಠದ ವಿರುದ್ಧ ಶ್ರೀರಾಮ ಸೇನೆ ಸೇರಿದಂತೆ ಕೆಲವು ಸಂಘಟನೆಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತ ಸಮಾಜದ ಸ್ವಾಸ್ಥ್ಯ ಕದಡುತ್ತಿವೆ’ ಎಂದು ಆರೋಪ ಮಾಡಿದರು.

‘200 ವರ್ಷಗಳಿಗಿಂತ ಅಧಿಕ ಕಾಲದಿಂದ ತೋಂಟದಾರ್ಯ ಮಠದ ಸುತ್ತಲೂ ಇರುವ ಅಂದಾಜು 80 ಎಕರೆ ಜಾಗ ಮಠದ ಮಾಲೀಕತ್ವದಲ್ಲಿದೆ. ನಗರಸಭೆ ಸ್ಥಾಪನೆಯ ಪೂರ್ವದಿಂದಲೂ ಈ ಜಾಗದಲ್ಲೇ ಜಾತ್ರೆ ನಡೆಯುತ್ತ ಬಂದಿದೆ. ಈ ಜಾಗದಲ್ಲಿರುವ ಯಾವುದೇ ರಸ್ತೆಯನ್ನು ನಗರಸಭೆಯ ಸ್ವಾಧೀನಕ್ಕೆ ಕೊಟ್ಟಿಲ್ಲ. ಈ ಜಾಗೆ ಮಠದ ಮಾಲೀಕತ್ವದ್ದು ಎಂಬುದಕ್ಕೆ ಸಾಕಷ್ಟು ದಾಖಲೆಗಳು ಮತ್ತು ನಗರಸಭೆಯ ಆದೇಶಗಳು ಇವೆ. ಮಠದ ಈ ಎಲ್ಲ ಬೆಳವಣಿಗೆಯನ್ನು ಸಹಿಸದ, ಸಮಾಜದಲ್ಲಿ ಅಶಾಂತಿ ಉಂಟುಮಾಡಬೇಕು ಎಂಬ ಉದ್ದೇಶದಿಂದ ರಾಜು ಖಾನಪ್ಪನವರ ಹಾಗೂ ಸಹಚರರು ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಶ್ರೀಗಳನ್ನು ವಿರೋಧಿಸಿ ಹೇಳಿಕೆ ನೀಡುತ್ತಾರೆ. ಅವರು ನೀಡಿದ ಎಲ್ಲ ಹೇಳಿಕೆಗಳು ಸಂಪೂರ್ಣ ಸುಳ್ಳಿನಿಂದ ಕೂಡಿರುತ್ತವೆ’ ಎಂದು ಹರಿಹಾಯ್ದರು.

‘ಸುಳ್ಳು ಅಪಾದನೆ ಮಾಡುತ್ತ ಹಾಗೂ ಕಾನೂನುಬಾಹಿರವಾಗಿ ಮಾಡುತ್ತಿರುವ ಹೋರಾಟದಿಂದ ಮಠದ ಭಕ್ತರ ಭಾವನೆಗಳಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ಆದಕಾರಣ ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಕೃಷ್ಣ ಪರಾಪೂರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಉಪಾಧ್ಯಕ್ಷ ಡಿ.ಜಿ.ಜೋಗಣ್ಣವರ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪಿ.ಎಸ್.ಸಂಶಿಮಠ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಸದಸ್ಯ ವಿನಾಯಕ ಮಾನ್ವಿ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ರಾಮಣ್ಣ ಫಲದೊಡ್ಡಿ, ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥ ವಿ.ಆರ್.ಗೋವಿಂದಗೌಡ್ರ, ಕೆ.ಎಚ್.ಬೇಲೂರ, ಎಸ್.ಎನ್.ಬಳ್ಳಾರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್.ಚಟ್ಟಿ, ಸದಾಶಿವಯ್ಯ ಮದರಿಮಠ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರಾಜು ಗುಡಿಮನಿ, ಮಾರ್ತಾಂಡಪ್ಪ ಹಾದಿಮನಿ, ಗಂಗಾಧರ ಹಿರೇಮಠ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್ ಅಂಗಡಿ ಸೇರಿದಂತೆ ನೂರಾರು ಮಂದಿ ಇದ್ದರು.

ರಥಬೀದಿಗಾಗಿ ಕಾನೂನು ಹೋರಾಟ:

‘ತೋಂಟದಾರ್ಯ ಮಠದ ಮುಂದಿನ ರಸ್ತೆ ಮಠದ ಒಡೆತನಕ್ಕೆ ಸೇರಿದ್ದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿರುವ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮತ್ತು ಗದಗ ಬಂದ್ ಕೈಬಿಟ್ಟು ಕಾನೂನು ಹೋರಾಟ ಆರಂಭಿಸಲಾಗುವುದು’ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ತಿಳಿಸಿದರು. ‘ಶ್ರೀರಾಮ ಸೇನೆ ಆಟೊ ಸೇನೆ ಹಾಗೂ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಆಶ್ರಯದಲ್ಲಿ ತೋಂಟದಾರ್ಯ ಮಠದ ಮುಂದಿನ ಸಾರ್ವಜನಿಕರ ರಸ್ತೆಯನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲಾಗಿತ್ತು. ಆದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೇ 13ರಂದು ನಡೆದ ಸಭೆಯಲ್ಲಿ ನಗರಸಭೆ ಅಧಿಕಾರಿಗಳು ಆ ರಸ್ತೆ ಶ್ರೀಮಠಕ್ಕೆ ಸೇರಿದೆ ಎಂದು ಸ್ಪಷ್ಟಪಡಿಸಿದ್ದರಿಂದ ಹೋರಾಟ ಕೈಬಿಡಲಾಗಿದೆ. ಜತೆಗೆ ಮೇ 15ರಂದು ಕರೆ ನೀಡಿದ್ದ ಬಂದ್ ಹಿಂಪಡೆಯಲಾಗಿದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಈ ಹಿಂದಿನ ನಗರಸಭೆ ಅಧಿಕಾರಿಗಳು ಆ ರಸ್ತೆ ನಗರಸಭೆಗೆ ಸೇರಿದ್ದು ಎಂದು ದಾಖಲೆ ಒದಗಿಸಿದ್ದರು. ಆದರೆ ಈಗ ಏಕಾಏಕಿ ಮಠದ ಆಡಳಿತ ಮಂಡಳಿ ಆ ಜಾಗ ನಮ್ಮದು ಎನ್ನುತ್ತಿದೆ. ಜತೆಗೆ ಅಧಿಕಾರಿಗಳು ಕೂಡ ಮಠದ ಪರವಾಗಿ ಧ್ವನಿ ಎತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇನ್ನು ಮುಂದೆ ರಥಬೀದಿ ವಿಷಯವಾಗಿ ಕಾನೂನು ಹೋರಾಟ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.