ಗದಗ: ‘ಇಲ್ಲಿನ ವಿಎನ್ಟಿ ರಸ್ತೆಯಲ್ಲಿರುವ ನಗರೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಅಕ್ಟೋಬರ್ 2ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ’ ಎಂದು ಆರ್ಯವೈಶ್ಯ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಮರಾವ್ ತಿಳಿಸಿದರು.

‘ಬಿದರೆಯ ಆಧ್ಯಾತ್ಮಿಕ ಚಿಂತಕ ವಿನಯರಾಮ್ ಅವರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಕಟ್ಟಡದ ಮಾದರಿ ತಯಾರಿಸಿ 2022ರಿಂದ ನಿರಂತರ ಪ್ರವಾಸ ಕೈಗೊಂಡು ರಾಜ್ಯದ ವಿವಿಧಡೆ ಪ್ರದರ್ಶನ ಮಾಡಲು ಸಂಕಲ್ಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಗದಗ ನಗರದಲ್ಲಿ ಆರ್ಯವೈಶ್ಯ ಸಮಾಜ ಹಾಗೂ ನಗರೇಶ್ವರ ದೇವಸ್ಥಾನದ ಸಹಯೋಗದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಗದಗ-ಬೆಟಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಪ್ರತಿದಿನ ಸಂಜೆ 4 ರಿಂದ ರಾತ್ರಿ 8ರವರೆಗೆ ಶ್ರೀರಾಮ ಮಂದಿರದ ಮಾದರಿ ಹಾಗೂ ಬಾಲರಾಮನ ದರ್ಶನ ಪಡೆಯಬಹುದು’ ಎಂದು ತಿಳಿಸಿದರು.

ಶ್ರೀರಾಮ ಮಂದಿರ ಮಾದರಿ ತಯಾರಕ ವಿನಯರಾಮ್ ಮಾತನಾಡಿ, ‘ಶ್ರೀರಾಮನ ಆದರ್ಶ ಗುಣಗಳು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಲ್ಲ. ಶ್ರೀರಾಮನ ಆದರ್ಶ ಗುಣಗಳು ಸರ್ವರಲ್ಲಿ ಬರಬೇಕು ಎಂಬು ಉದ್ದೇಶದಿಂದ ರಾಜ್ಯದ 108 ಕಡೆ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಮಾಡುವ ಸಂಕಲ್ಪ ಮಾಡಿದ್ದೇನೆ. ಪ್ರಸ್ತುತ ಗದಗ ಜಿಲ್ಲೆ 17ನೇ ಜಿಲ್ಲೆಯಾಗಿದ್ದು, ಈವರೆಗೆ ಒಟ್ಟು 91 ಕಡೆ ಪ್ರದರ್ಶನ ಮಾಡಿದ್ದೇನೆ’ ಎಂದು ತಿಳಿಸಿದರು.

‘ವಯಸ್ಸಾದವರು, ಬಹಳಷ್ಟು ಜನರು ಅಯ್ಯೋಧ್ಯೆಗೆ ಹೋಗಿ ಶ್ರೀರಾಮ ಮಂದಿರ ನೋಡಲು ಆಗದವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಂದಿರದ ಮಾದರಿ ತಯಾರಿಸಿ, ಪ್ರದರ್ಶನ ಏರ್ಪಡಿಸಿಕೊಂಡು ಬಂದಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.