ಗದಗ: ರಾಜಯೋಗಿನಿ ಪ್ರಕಾಶಮಣಿಜೀ ಅವರ 18ನೇ ಪುಣ್ಯತಿಥಿ ಅಂಗವಾಗಿ ಭಾರತ ಹಾಗೂ ನೇಪಾಳದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ 1,500 ಸೇವಾಕೇಂದ್ರಗಳಲ್ಲಿ ಆ.22ರಿಂದ 25ರವರೆಗೆ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಜಯಂತಿ ಹೇಳಿದರು.

‘100 ಗಂಟೆಗಳ ಅವಧಿಯಲ್ಲಿ ಒಂದು ಲಕ್ಷ ಯೂನಿಟ್ ರಕ್ತ ಸಂಗ್ರಹದ ಗುರಿ ಹೊಂದಲಾಗಿದ್ದು, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಅಭಿಯಾನ ಆಯೋಜಿಸಲಾಗಿದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆ.22ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಡಂಬಳನಾಕಾದ ಸಿದ್ಧರಾಮೇಶ್ವರ ನಗರದಲ್ಲಿನ ಆಧ್ಯಾತ್ಮಿಕ ಸಂಸ್ಕೃತಿ ಭವನದ ಬ್ರಹ್ಮಕುಮಾರಿ ಸಭಾಂಗಣದಲ್ಲಿ (ಮಾಹಿತಿಗೆ: ರೇಖಾ– 6360753992) ರಕ್ತದಾನ ಶಿಬಿರ ನಡೆಯಲಿದೆ. ಆ.23ರಂದು ಹುಲಕೋಟಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ (ಮಾಹಿತಿಗೆ: ಉಮಾದೇವಿ– 9483903062), ಆ.24ರಂದು ನರೇಗಲ್ನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ (ಮಾಹಿತಿಗೆ: ಸವಿತಾ– 9480970805) ಮತ್ತು ಆ.25ರಂದು ಬೆಟಗೇರಿಯ ಹೊಸಪೇಟೆ ಚೆಕ್ನಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ’ ಎಂದರು.

‘ಬೃಹತ್ ರಕ್ತದಾನ ಶಿಬಿರಕ್ಕೆ ಆ.22ರಂದು ಬೆಳಿಗ್ಗೆ 10ಕ್ಕೆ ಡಂಬಳನಾಕಾದ ಸಿದ್ಧರಾಮೇಶ್ವರ ನಗರದಲ್ಲಿನ ಆಧ್ಯಾತ್ಮಿಕ ಸಂಸ್ಕೃತಿ ಭವನದಲ್ಲಿ ಚಾಲನೆ ಸಿಗಲಿದೆ. ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ವೈದ್ಯಾಧಿಕಾರಿ ಡಾ. ಗಿರೀಶ್ ನಾಗರಾಳ ಸೇರಿ ಹಲವರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ರಕ್ತದಾನ ಶಿಬಿರದಲ್ಲಿ ಭಾಗವಹಿಸುವವರು 63607 53992ಕ್ಕೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು.

ರಕ್ತದಾನ ಶ್ರೇಷ್ಠ ದಾನವಾಗಿದ್ದು ತುರ್ತು ಸಂದರ್ಭದಲ್ಲಿ ಜೀವರಕ್ಷಣೆಗೆ ಅತ್ಯಗತ್ಯವಿರುವುದರಿಂದ ಗದಗ ನಗರದ ಯುವಕರು ಮಹಿಳೆಯರು ಸಾರ್ವಜನಿಕರು ರಕ್ತದಾನ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು
ಜಯಂತಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.