ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಅದ್ದೂರಿ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ

Published : 19 ಸೆಪ್ಟೆಂಬರ್ 2024, 15:20 IST
Last Updated : 19 ಸೆಪ್ಟೆಂಬರ್ 2024, 15:20 IST
ಫಾಲೋ ಮಾಡಿ
Comments

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ  ಡಿಜೆಗಳ ಅಬ್ಬರವಿಲ್ಲದೆ ನಾಡಿನ ವಿವಿಧ ಕಲಾತಂಡಗಳೊಂದಿಗೆ ಸೋಮೇಶ್ವರ ತೇರಿನ ಮನೆ ಹತ್ತಿರ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆ ವೈಭವದಿಂದ ನೆರವೇರಿತು.

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು.

ಸೂರಶೆಟ್ಟಿಕೊಪ್ಪದ ಜಗ್ಗಲಗಿ ಮೇಳ, ಸಾಗರ ತಾಲ್ಲೂಕು ಗುಬ್ಬಿಯ ಶ್ರೀಕುಮಾರೇಶ್ವರ ಜಾನಪದ ಡೊಳ್ಳಿನ ತಂಡ, ವೀರಗಾಸೆ ಕುಣಿತ, ಯಕ್ಷಗಾನ ನೃತ್ಯ ಮೆರವಣಿಗೆಯ ರಂಗು ಹೆಚ್ಚಿಸಿದ್ದವು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆದವು.

ಚೆನ್ನಪ್ಪ ಜಗಲಿ, ಅಶೋಕಗೌಡ ಪಾಟೀಲ, ಸುರೇಶ ರಾಚನಾಯಕರ್, ಸಿದ್ದನಗೌಡ ಬಳ್ಳೊಳ್ಳಿ, ಶೆಕಪ್ಪ ಹುರಕಡ್ಲಿ, ಶಿವಯೋಗಿ ಅಂಕಲಕೋಟಿ, ಬಸವೇಶ ಮಹಾಂತಶೆಟ್ಟರ, ವಿ.ಎಲ್. ಪೂಜಾರ, ಮಹಾದೇವಪ್ಪ ಅಣ್ಣಿಗೇರಿ, ನಿಂಗಪ್ಪ ಬನ್ನಿ, ಕುಬೇರಪ್ಪ ಮಹಾಂತಶೆಟ್ಟರ, ಪಾಟೀಲಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.

ಲಕ್ಷ್ಮೇಶ್ವರದ ಬಸ್ತಿಬಣದ ಮೇಲಿನ ಕಾಮನಕಟ್ಟೆಯಲ್ಲಿ ಮಹಾಕವಿ ಪಂಪ ಯುವಕ ಮಂಡಳದ ವತಿಯಿಂದ ಪ್ರತಿಷ್ಠಾಪಿಸಿದ್ದ ವಿನಾಯಕನ ಮೂರ್ತಿ ವಿಸರ್ಜನೆ ಅದ್ದೂರಿಯಾಗಿ ನಡೆಯಿತು. ಕುಂದಾಪುರದ ಚಂಡಿ ಮದ್ದಳೆ ವಾದ್ಯ ಕಲಾತಂಡದೊಂದಿಗೆ ಮೂರ್ತಿಯ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಕಾಮನಕಟ್ಟೆಯಿಂದ ಆರಂಭವಾದ ಮೆರವಣಿಗೆಯು ಮಹಾಕವಿ ಪಂಪ ವರ್ತುಲದ ಮೂಲಕ ವಿದ್ಯಾರಣ್ಯ ವರ್ತುಲ, ಬಜಾರ, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮೂಲಕ ಸಂಚರಿಸಿತು.

ಲಕ್ಷ್ಮೇಶ್ವರ ಬಸ್ತಿಬಣದ ಮೇಲಿನ ಕಾಮನಕಟ್ಟೆಯಲ್ಲಿ ಮಹಾಕವಿ ಪಂಪ ಯುವಕ ಮಂಡಳದ ವತಿಯಿಂದ ಪ್ರತಿಷ್ಠಾಪಸಿದ್ದ ಗಣಪತಿ ಮೂರ್ತಿ ವಿಸರ್ಜನೆ ಕುಂದಾಪುರದ ಚಂಡ ಮದ್ದಳೆ ವಾದ್ಯದೊಂದಿಗೆ ಅದ್ದೂರಿಯಾಗಿ ನಡೆಯಿತು
ಲಕ್ಷ್ಮೇಶ್ವರ ಬಸ್ತಿಬಣದ ಮೇಲಿನ ಕಾಮನಕಟ್ಟೆಯಲ್ಲಿ ಮಹಾಕವಿ ಪಂಪ ಯುವಕ ಮಂಡಳದ ವತಿಯಿಂದ ಪ್ರತಿಷ್ಠಾಪಸಿದ್ದ ಗಣಪತಿ ಮೂರ್ತಿ ವಿಸರ್ಜನೆ ಕುಂದಾಪುರದ ಚಂಡ ಮದ್ದಳೆ ವಾದ್ಯದೊಂದಿಗೆ ಅದ್ದೂರಿಯಾಗಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT