ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸರಿಗಳಲ್ಲಿ ನಳನಳಿಸುತ್ತಿವೆ ಸಸ್ಯಗಳು

ಕೃಷಿ ಅರಣ್ಯೀಕರಣಕ್ಕಾಗಿ 1 ಲಕ್ಷ ಸಸಿಗಳನ್ನು ಹಂಚಲು ಯೋಜನೆ
Last Updated 5 ಜೂನ್ 2021, 5:46 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮೀಪದ ಶೆಟ್ಟಿಕೇರಿ ಗ್ರಾಮದ ಹೊರವಲಯದಲ್ಲಿನ ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆಗಳ ನರ್ಸರಿಗಳಲ್ಲಿ ಲಕ್ಷಾಂತರ ಸಸಿಗಳು ಬೆಳೆಯುತ್ತಿದ್ದು, ಎರಡೂ ನರ್ಸರಿಗಳು ಹಚ್ಚ ಹಸಿರಿನಿಂದ ಕಣ್ಮನ ಸೆಳೆಯುತ್ತಿವೆ.

ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ನರ್ಸರಿ ಅಂದಾಜು 3 ಹೆಕ್ಟೇರ್‌ನಷ್ಟು ವಿಶಾಲವಾಗಿದ್ದು ಇಲ್ಲಿ 5 ಲಕ್ಷ ಸಸಿಗಳನ್ನು ಬೆಳೆಸುವ ಸಾಮರ್ಥ್ಯ ಹೊಂದಿದೆ. ಅದರಂತೆ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರ 2.5 ಹೆಕ್ಟೇರ್ ವಿಶಾಲ ಇದ್ದು ಇಲ್ಲಿ ಅಂದಾಜು ಮೂರು ಲಕ್ಷ ಸಸಿಗಳನ್ನು ಬೆಳೆಸಲು ಸಾಧ್ಯವಿದೆ.

‘ಪ್ರಾದೇಶಿಕ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸದ್ಯ 1.18 ಲಕ್ಷ ಸಸಿಗಳು ಬೆಳೆದು ನಿಂತಿವೆ. ಅವುಗಳಲ್ಲಿ ಹೊಂಗೆ, ತಪಸಿ, ನೇರಳೆ, ಮಹಾಗನಿ, ಕರಿಬೇವು, ಪೇರಲ, ಕರಿಜಾಲಿ, ಬೇವು, ನುಗ್ಗೆ, ಸಾಗವಾನಿ, ಸಿಲ್ವರ್, ಅರಳೆ, ಬಸರಿ, ಚಳ್ಳೆ, ಸ್ತೆಥೋಡಿಯಾ, ಗುಲ್‍ಮೊಹರ್, ಹೊಳೆಮತ್ತಿ, ಬಂಗಾಳಿ ಸಸಿಗಳು ಇವೆ’ ಎಂದು ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎ.ಎಚ್. ಮುಲ್ಲಾ ಮಾಹಿತಿ ನೀಡಿದರು.

‘ಪ್ರಸ್ತುತ ಸಾಲಿನಲ್ಲಿ 15 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಿ ಉಳಿದ ಸಸಿಗಳನ್ನು ಅರಣ್ಯ ಪ್ರದೇಶದಲ್ಲಿ ಬೆಳೆಸಲು ಯೋಜನೆ ರೂಪಿಸಲಾಗಿದೆ. ಈ ಬಾರಿ ಸಾರ್ವಜನಿಕರಿಂದ ಒಳ್ಳೆ ಸ್ಪಂದನೆ ಇದ್ದು ನರ್ಸರಿಗೆ ಸಸಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ’ ಎಂದು ಇದೇ ಸಂದರ್ಭದಲ್ಲಿ ಅವರು ಖುಷಿ ವ್ಯಕ್ತಪಡಿಸಿದರು.

ಇನ್ನು ಸಾಮಾಜಿಕ ವಲಯ ಅರಣ್ಯ ಇಲಾಖೆ ನರ್ಸರಿಯಲ್ಲೂ ಸಹ 1.31 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಈ ನರ್ಸರಿಯಲ್ಲಿ 13 ಸಾವಿರ ಹೆಬ್ಬೇವು, 18 ಸಾವಿರ ಪೇರಲ, 16 ಸಾವಿರ ಮಹಾಗನಿ, 5 ಸಾವಿರ ಕರಿಬೇವು, 16 ಸಾವಿರ ನುಗ್ಗೆ, 5 ಸಾವಿರ ಹೊಂಗೆ, ಬೇವು 2 ಸಾವಿರ, ನಿಂಬೆ 7 ಸಾವಿರ, 18 ಸಾವಿರ ಸಿಲ್ವರ್ ಓಕ್, 2 ಸಾವಿರ ಹುಣಸೆ, 600 ಶ್ರೀಗಂಧ, 340 ಕಾಡುಬಾದಾಮಿ, 2 ಸಾವಿರ ಕಾಡು ನೆಲ್ಲಿ ಸಸಿಗಳು ಇವೆ.

‘2020-21ನೇ ಸಾಲಿಗಾಗಿ ರೈತರ ಹೊಲಗಳಲ್ಲಿ ಕೃಷಿ ಅರಣ್ಯೀಕರಣಕ್ಕಾಗಿ 1 ಲಕ್ಷ ಸಸಿಗಳನ್ನು ಹಂಚಲು ಯೋಜಿಸಲಾಗಿದೆ. ಜೂನ್‌ನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಮ್ಮ ಇಲಾಖೆ ವತಿಯಿಂದ ಅಂದಾಜು 5 ಸಾವಿರ ಸಸಿಗಳನ್ನು ನೆಡಲು ಗುರಿ ಹಾಕಿಕೊಳ್ಳಲಾಗಿದೆ’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಪಿ. ಹೊಸಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT