ಗದಗ: ‘ಕನ್ನಡ ಉಳಿವಿಗಾಗಿ, ಬೆಳವಣಿಗೆಗಾಗಿ ಮಠಗಳು ಪ್ರಯತ್ನಿಸಿದಾಗ ನಮ್ಮ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಬೆಳೆಯಲು ಸಾಧ್ಯ. ಕನ್ನಡ ನಾಡು-ನುಡಿ, ನೆಲ-ಜಲದ ಸಮಸ್ಯೆಗಳು ಎದುರಾದಾಗ ಅನೇಕ ಹೋರಾಟಗಳಲ್ಲಿ ತೋಂಟದಾರ್ಯ ಮಠದ ಪಾತ್ರ ಹಿರಿದಾಗಿದೆ’ ಎಂದು ಸಿದ್ದರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಗರದ ತೋಂಟದಾರ್ಯ ಮಠದಲ್ಲಿ ನಡೆದ 2,770ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕರ್ನಾಟಕದ ಗಡಿಭಾಗ ಚಿಂಚಣಿ ಹಾಗೂ ಜಿಲ್ಲೆಯ ಬೈರನಹಟ್ಟಿಯಲ್ಲಿ ಭಾಷೆಯ ಉಳಿವಿಗಾಗಿ ಕನ್ನಡ ರಥವನ್ನು ಎಳೆಯುತ್ತಾರೆ. ಕರ್ನಾಟಕದಲ್ಲಿ ಕನ್ನಡ ಮಠವೆಂದರೆ ತೋಂಟದಾರ್ಯ ಮಠ. ಕನ್ನಡ ಜಗದ್ಗುರುಗಳೆಂದರೆ ಸಿದ್ದಲಿಂಗ ಶ್ರೀಗಳು. ಆರುನೂರಕ್ಕೂ ಹೆಚ್ಚು ಕನ್ನಡ ಮೌಲಿಕ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.

ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ವಚನ ಸಂಗೀತ ನಡೆಸಿಕೊಟ್ಟರು. ಅನ್ವಿತಾ ಟಿ. ಪೋತದಾರ ಧಾರ್ಮಿಕ ಗ್ರಂಥ ಪಠಿಸಿದರು. ತುಳಸಿಪ್ರಿಯಾ ಸಿ. ಶಿರಹಟ್ಟಿ ವಚನ ಚಿಂತನ ನಡೆಸಿಕೊಟ್ಟರು.

ಎಸ್.ಎಸ್. ಹರ್ಲಾಪೂರ ವೇದಿಕೆಯಲ್ಲಿದ್ದರು. ತೋಂಟದಾರ್ಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ. ಉಮೇಶ ಪುರದ ಹಾಗೂ ವಿದ್ಯಾಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಇದ್ದರು.

ಸಿದ್ದಲಿಂಗ ಶ್ರೀಗಳು ತಮ್ಮ ಕೊನೆಯುಸಿರು ಇರುವವರೆಗೂ ಕನ್ನಡ ಕೈಂಕರ್ಯಕ್ಕೆ ಹೋರಾಡಿ ಕನ್ನಡದ ಜಗದ್ಗುರುಗಳೇ ಆದರು. ಕನ್ನಡ ಉಳಿದರೆ ನಾವೆಲ್ಲಾ ಉಳಿಯುತ್ತೇವೆ
ಶಶಿಧರ ತೋಡಕರ ಪ್ರಾಂಶುಪಾಲ ಈಶ್ವರನ್ ಪದವಿಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.