ಗದಗ: ದಟ್ಟ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಳ್ಳುವ ದೈತ್ಯ ಜೇಡ (ಜೈಂಟ್ವುಡ್ ಸ್ಪೈಡರ್) ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ಗೋಚರವಾಗಿದೆ.

ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ಮತ್ತು ಅವರ ತಂಡದ ಸಂಗಮೇಶ ಕಡಗದ, ಶರಣುಗೌಡರ ಅವರು ದೈತ್ಯ ಜೇಡವನ್ನು ಪತ್ತೆ ಮಾಡಿದ್ದಾರೆ.

ದೈತ್ಯ ಜೇಡ ಕೆಲ ವಿಶೇಷ ಲಕ್ಷಣಗಳನ್ನು ಒಳಗೊಂಡಿದೆ. ಜೈಂಟ್ವುಡ್ ಸ್ಪೈಡರ್ಗಳಲ್ಲಿ ಗಂಡಿಗಿಂತ ಹೆಣ್ಣು ಬಲಿಷ್ಠ. ಹೆಣ್ಣು ಜೇಡ ಮೂರು ಇಂಚಿನಷ್ಟು ಉದ್ದ ಇರುತ್ತದೆ. ಗಂಡು ಜೇಡಗಳು ಸಣ್ಣದಿದ್ದು, ಹೆಣ್ಣು ಜೇಡ ಹೆಣೆದ ಬಲೆಯ ಮೇಲೆ ವಾಸ ಮಾಡುತ್ತವೆ.

‘ಗದಗ ಜಿಲ್ಲೆಯಂತಹ ಶುಷ್ಕ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗುವುದು ಅಪರೂಪ. ‘ಇವುಗಳಿಂದ ಮನುಷ್ಯರಿಗೆ ಅಪಾಯ ಇಲ್ಲ. ಈ ಜೇಡದಲ್ಲಿರುವ ವಿಷದ ಅಂಶ ಕೀಟಗಳನ್ನು ಹಿಡಿಯಲು ಬಳಕೆ ಆಗುತ್ತದೆ’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ತಿಳಿಸಿದರು.

ಜೈಂಟ್ ವುಡ್ ಸ್ಪೈಡರ್ ನೆಫಿಲಾ ಕುಲಕ್ಕೆ ಸೇರಿದೆ. ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಒಟ್ಟಾರೆ ಜೀವವೈವಿಧ್ಯದ ಸೂಚಕಗಳಾಗಿಯೂ ಇವು ಕಾರ್ಯನಿರ್ವಹಿಸುತ್ತವೆ

–ಮಂಜುನಾಥ ಎಸ್. ನಾಯಕ ಜೀವವೈಧ್ಯ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.