ಗಜೇಂದ್ರಗಡ: ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶನಿವಾರ ಕಾಲಕಾಲೇಶ್ವರ ವೃತ್ತದಲ್ಲಿ ಗಜೇಂದ್ರಗಡ, ರೋಣ, ನರೇಗಲ್ಲ ಮಹಿಳಾ ಬ್ಲಾಕ್ ಕಾಂಗ್ರೆಸ್ ಹಾಗೂ ಜಿ.ಎಸ್. ಪಾಟೀಲ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್ನಲ್ಲಿ ಕಾರ್ಯಕರ್ತರು ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಹಕ್ಕೊತ್ತಾಯ ಮಂಡಿಸಿ, ಕಾಲಕಾಲೇಶ್ವರ ವೃತ್ತದವರೆಗೆ ಜಾಥಾ ನಡೆಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ರೋಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಾಜ್ಬೇಗಂ ಎಲಿಗಾರ ಮಾತನಾಡಿ, ‘ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳಿಸಲು ಶ್ರಮಿಸಿದ ಜಿ.ಎಸ್.ಪಾಟೀಲ ಅವರಿಗೆ ಸಚಿವ ಸ್ಥಾನದಿಂದ ವಂಚಿಸಲಾಗುತ್ತಿದೆ. ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ಕೆಪಿಸಿಸಿ ಕಚೇರಿ ಮುಂದೆ ಧರಣಿ ಹಾಗೂ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ಬಳಿ ನ್ಯಾಯ ಕೇಳುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕಿ ಮಂಜುಳಾ ಹುಲ್ಲಣ್ಣವರ ಮಾತನಾಡಿ, ‘4 ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ಸಲ್ಲಿಸುವುದರ ಜೊತೆಗೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಹರಿಹಾಯ್ದರು.

ನರೇಗಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರೇವಡಿ, ಸುಮಂಗಲಾ ಇಟಗಿ, ಲಕ್ಷ್ಮೀ ಗಡಗಿ, ಗೀತಾ ಕೊಪ್ಪದ, ವಿಜಯಲಕ್ಷ್ಮೀ ವಸ್ತ್ರದ, ಶರಣಮ್ಮ ಮಠದ, ಶಾರದಾ ರಾಠೋಡ, ರೇಣುಕಾ ಮಡಿವಾಳರ, ವಿಠ್ಠುಬಾಯಿ ರಂಗ್ರೇಜಿ, ರೇಣುಕಾ ಧರ್ಮಾಯತ, ಅಂಬಿಕಾ ತಳವಾರ, ಶೋಭಾ ಕಟ್ಟಿ, ಮುಖಂಡರಾದ ಶರಣಪ್ಪ ಬೆಟಗೇರಿ, ಮುರ್ತುಜಾ ಡಾಲಾಯತ್, ಸಿದ್ದಪ್ಪ ಬಂಡಿ, ಹೆಚ್.ಎಸ್. ಸೋಂಪೂರ, ಅಪ್ಪು ಮತ್ತಿಕಟ್ಟಿ, ರಾಜು ಸಾಂಗ್ಲೀಕರ, ಬಸವರಾಜ ಚನ್ನಿ, ಶರಣಪ್ಪ ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.