

ಅಧಿಕೃತಗೊಳಿಸಲು ಕ್ರಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2150ಕ್ಕೂ ಹೆಚ್ಚು ನಳಗಳ ಸಂಪರ್ಕ ನೀಡಲಾಗಿದೆ. ಅಧಿಕ ಸಂಖ್ಯೆಯಲ್ಲಿರುವ ಅನಧಿಕೃತ ನಳಗಳನ್ನು ಅಧಿಕೃತಗೊಳಿಸುವ ಪ್ರಕ್ರಿಯೆ ನಡೆದಿದೆ. ನಮ್ಮಲ್ಲಿ ನೀರಿನ ತೆರಿಗೆ ಸಂಗ್ರಹ ಕಡಿಮೆಯಿದೆ. ಸದ್ಯ ಪಟ್ಟಣದಲ್ಲಿ ನಡೆದಿರುವ ಮೊದಲ ಹಂತದ ಅಮೃತ 2.0 ಯೋಜನೆಯಡಿ 24/7 ನೀರು ಪೂರೈಸುವ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆಗ ಪ್ರತಿ ಮನೆಗೂ ಮೀಟರ್ ಅಳವಡಿಸಲಿದ್ದೇವೆ. ಧಾರ್ಮಿಕ ಕೇಂದ್ರ ಸಂಘ ಸಂಸ್ಥೆಗಳಿಗೆ ಅಧಿಕೃತಗೊಳಿಸಿಕೊಳ್ಳಲು ಪಟ್ಟಣ ಪಂಚಾಯಿತಿಗೆ ಬಂದು ಮನವಿ ಸಲ್ಲಿಸಲು ಈಗಾಗಲೇ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ನಳಗಳ ಕಡಿವಾಣಕ್ಕೆ ಹಾಗೂ ತೆರಿಗೆ ಸಂಗ್ರಹಕ್ಕೆ ಕ್ರಮವಹಿಸಲಾಗುವುದು.–ಮಹೇಶ ಬಿ. ನಿಡಶೇಶಿ ಮುಖ್ಯಾಧಿಕಾರಿ
ನರೇಗಲ್ ಪಟ್ಟಣ ಪಂಚಾಯಿತಿ ಹಸ್ತಾಂತರವಾಗುವುದಕ್ಕೂ ಮುನ್ನವೇ ಹಾಳು ಕೆಡಬ್ಲ್ಯುಎಸ್ ವತಿಯಿಂದ ನಿರ್ಮಿಸಲಾದ ಟ್ಯಾಂಕ್‌ಗಳು ಒಂಬತ್ತು ಕಡೆಗಳಲ್ಲಿ ಸೋರುತ್ತಿವೆ. ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ. ಇವರೆಡು ಟ್ಯಾಂಕ್‌ಗಳು ಪಟ್ಟಣ ಪಂಚಾಯಿತಿಗೆ ಈವರೆಗೆ ಹಸ್ತಾಂತರವಾಗಿಲ್ಲ. ಕಟ್ಟಡ ಪರಿಶೀಲನೆ ದುರಸ್ತಿ ಕಾರ್ಯಗಳ ನಂತರ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ನಮ್ಮ ವ್ಯಾಪ್ತಿಗೆ ಪಡೆದುಕೊಳ್ಳಲಾಗುವುದು–ಶಂಕ್ರಪ್ಪ ದೊಡ್ಡಣ್ಣವರ, ನೀರು ಪೂರೈಕೆ ವಿಭಾಗದ ಸಿಬ್ಬಂದಿ ನರೇಗಲ್ ಪಟ್ಟಣ ಪಂಚಾಯ್ತಿ
12 ವರ್ಷಗಳಿಂದ ಪಾಳು ಬಿದ್ದಿರುವ ನೀರು ಸಂಗ್ರಹಿಸುವ ಎರಡೂ ಟ್ಯಾಂಕ್‌ಗಳು ಸೋರುತ್ತಿವೆ. ಅವುಗಳನ್ನು ಬಳಕೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಬಳಕೆ ಮಾಡುವ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು–ಸೋಮಪ್ಪ ಹನಮಸಾಗರ, ದಲಿತ ಮುಖಂಡ ನರೇಗಲ್
ಆಕ್ರೋಶ ಪ್ರತಿ ಟ್ಯಾಂಕ್‌ಗೂ ₹50 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿದರೂ ಉಪಯೋಗಿಸಿಲ್ಲ. ಅದೇರೀತಿ 2010ರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದ್ಯಾಂಪೂರನಲ್ಲೂ 0.25 ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಗಾರ ನಿರ್ಮಿಸಲಾಗಿದೆ. ಅದು ಸಹ ಬೀಳುವ ಹಂತಕ್ಕೆ ಬಂದಿದೆ. ಅಧಿಕಾರಿಗಳು ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ–ಶರಣಪ್ಪ ಧರ್ಮಾಯತ, ರೈತ ಮುಖಂಡ ನರೇಗಲ್
ಮೀಟರ್ ಅಳವಡಿಸಲು ಕ್ರಮವಹಿಸಿ ಜನರು ಪ್ರತಿ ಹನಿ ನೀರಿಗೂ ತೆರಿಗೆ ಪಾವತಿ ಮಾಡುವವರೆಗೂ ನೀರು ಪೋಲು ತಡೆಯಲು ಮುಂದಾಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಎಲ್ಲಾ ಅನಧಿಕೃತ ನಳಗಳನ್ನು ಬಂದ್ ಮಾಡಿ ಅಧಿಕೃತಗೊಳಿಸಬೇಕು ಹಾಗೂ ಮೀಟರ್ ಅಳವಡಿಸಲು ಮುಂದಾಗಬೇಕು.–ಜಗದೀಶ ಸಂಕನಗೌಡ್ರ, ರೈತ ಸಮೃದ್ದಿ ಕೇಂದ್ರದ ಅಧ್ಯಕ್ಷ
ನಳಗಳನ್ನು ಅಧಿಕೃತ ಮಾಡುವ ಯೋಜನೆ ರೂಪಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ನೀರಿನ ಸಮಸ್ಯೆಯಾಗದಂತೆ ಆಯಾ ಓಣಿಗಳಿಗೆ ಪೂರೈಕೆ ಮಾಡಬೇಕು. ಆಗ ತೆರಿಗೆ ಸಂಗ್ರಹ ಸುಲಭವಾಗುತ್ತದೆ–ರಾಜೇಂದ್ರ ಜಕ್ಕಲಿ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.