ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಿಗೇರಿ ಅಮೃತೇಶ್ವರ ತಂಡ ಪ್ರಥಮ

ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ- ಲಕ್ಕುಂಡಿ ತಂಡ ರನ್ನರ್ ಅಪ್
Last Updated 9 ಜನವರಿ 2021, 16:57 IST
ಅಕ್ಷರ ಗಾತ್ರ

ಗದಗ: ಸೂಗಿರೇಶ್ವರ ಜಾತ್ರೆ ಅಂಗವಾಗಿ ಹುಯಿಲಗೋಳ ಗ್ರಾಮದಲ್ಲಿ ನಡೆದ 34ನೇ ವರ್ಷದ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅಣ್ಣಿಗೇರಿಯ ಅಮೃತೇಶ್ವರ ತಂಡ ಪ್ರಥಮ ಸ್ಥಾನ ಪಡೆಯಿತು.

ಸ್ವಾಮಿ ವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಿತು.

ಪಂದ್ಯಾವಳಿಯಲ್ಲಿ ಲಕ್ಕುಂಡಿಯಐತಿಹಾಸಿಕ ತಂಡ ದ್ವಿತೀಯ, ಬಾಗಲಕೋಟೆ ಜಿಲ್ಲೆಯ ನೆಲವಿಗಿಯ ಸ್ನೇಹಜೀವಿ ತಂಡ ತೃತೀಯ ಹಾಗೂ ಅಂತೂರ ಬೆಂತೂರಿನ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತು.

ಆತಿಥೇಯ ಹುಯಿಲಗೋಳದ ಸ್ವಾಮಿ ವಿವೇಕಾನಂದ ತಂಡ ಹಾಗೂ ಬೆಂತೂರಿನ ತಂಡದ ಮಧ್ಯೆ ನಡೆದ ಸೆಮಿಫೈನಲ್‌ ಪಂದ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ತೀವ್ರ ಸೆಣಸಾಟದಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮ ಅಂಕ ಪಡೆದು, ಪ್ರೇಕ್ಷಕರನ್ನು ಕುತೂಹಲದ ತುತ್ತತುದಿಗೆ ಕೂರಿಸಿದವು. ಬಳಿಕ ಬೆಂತೂರಿನ ತಂಡವು ಆತಿಥೇಯ ತಂಡವನ್ನು ಎರಡು ಅಂಕಗಳಿಂದ ಮಣಿಸಿ, ಸೆಮಿಫೈನಲ್‌ ಪ್ರವೇಶಿಸಿತು.

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಅಣ್ಣಿಗೇರಿಯ ಅಮೃತೇಶ್ವರ ತಂಡಕ್ಕೆ ₹15 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು. ಉಳಿದಂತೆ ಲಕ್ಕುಂಡಿಯ ಐತಿಹಾಸಿಕ ತಂಡಕ್ಕೆ ₹10 ಸಾವಿರ ನಗದು, ಟ್ರೋಫಿ, ಸ್ನೇಹಜೀವಿ ತಂಡಕ್ಕೆ ₹7 ಸಾವಿರ ನಗದು, ಟ್ರೋಫಿ ಮತ್ತು ಬೆಂತೂರಿನ ತಂಡಕ್ಕೆ ₹5 ಸಾವಿರ ನಗದು, ಟ್ರೋಫಿ ನೀಡಲಾಯಿತು.

ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹದೇವ ಗಣಾಚಾರಿ, ಪಿ.ಸಿ.ಕಾಳೆ, ಹಿರಿಯ ಕಬಡ್ಡಿಪಟುಗಳಾದ ಕೆ.ಎನ್. ಸೊರಟೂರ, ರಾಮಣ್ಣ ನೀರಲಗಿ, ಹೇಮಂತ ಎಚ್. ದಾಸರ, ಎಸ್.ಎನ್. ಸೊರಟೂರ, ಶ್ರೀಕಾಂತ ಹಟ್ಟಿ, ಗ್ರಾಮದ ಮುಖಂಡರಾದ ಅಶೋಕ ಬೆಳಗಟ್ಟಿ, ಎನ್.ಜಿ.ಹೂಗಾರ, ಸಂಘಟಿಕರಾದ ಬಸವರಾಜ ರೋಣದ ಇದ್ದರು.

ಗಣ್ಯರಿಗೆ ಸನ್ಮಾನ

ಎಎಸ್‍ಐ ಹುದ್ದೆಗೆ ಬಡ್ತಿ ಪಡೆದ ಗ್ರಾಮದ ಆರ್.ಎಚ್.ನೀರಲಗಿ, ಕಬಡ್ಡಿ ಪಂದ್ಯಾವಳಿಗೆ ಬಹುಮಾನ ನೀಡಿದ ಅಶೋಕ ಹದ್ಲಿ, ಪ್ರಕಾಶ ಕರಿಮೇರಿ, ಸಂಗಪ್ಪ ಮಾರನಬಸರಿ, ಈಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ರಮೇಶ ಬೆಳಗಟ್ಟಿ, ಷರೀಫ ಹೆಬ್ಬಳ್ಳಿ, ಮಿಲಿಂದ ಕಾಳೆ, ದೇವಪ್ಪ ಬನ್ನಿಕೊಪ್ಪ, ಚನ್ನಬಸಪ್ಪ ಹೂಗಾರ, ಪಂಚಾಕ್ಷರಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT