ಬುಧವಾರ, ಅಕ್ಟೋಬರ್ 21, 2020
21 °C

ನರೇಗಲ್‌ನಲ್ಲಿ ಭೂ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರೇಗಲ್: ಸತತವಾಗಿ ಸುರಿದ ಮಳೆಗೆ ಪಟ್ಟಣದ ಎರಡು ಕಡೆ ಭೂ ಕುಸಿತವಾಗಿದೆ. ಇಲ್ಲಿನ 7ನೇ ವಾರ್ಡ್‌ನ ದರ್ಗಾ ಓಣಿಯ ಸಮೀಪ ಮಂಗಳವಾರ ರಸ್ತೆ ಕುಸಿದು ಹೊಂಡ ಬಿದ್ದಿದ್ದು, 12ನೇ ವಾರ್ಡ್‌ನಲ್ಲಿ ರಸ್ತೆ ಮಧ್ಯದಲ್ಲಿ ಭೂ ಕುಸಿತವಾಗಿದೆ.

ಈ ಹಿಂದೆ ಇಲ್ಲಿ ಸಿಮೆಂಟ್‌ ರಸ್ತೆ ಮಾಡಲಾಗಿತ್ತು. ರಸ್ತೆಯ ಮಧ್ಯದಲ್ಲಿ ಹಗೆ (ಜೋಳ ಸಂರಕ್ಷಿಸಿಡಲು ಅಗೆದ ಆಳವಾದ ಗುಂಡಿ) ಇದ್ದು ಅದನ್ನು ಸರಿಯಾಗಿ ಮುಚ್ಚದೇ, ಅದರ ಮೇಲೆ ಸಿಸಿ ಬೆಡ್ ಹಾಕಲಾಗಿತ್ತು. ಈಗ ಮಳೆ ಯಿಂದಾಗಿ ರಸ್ತೆಯ ಕೆಳಭಾಗದ ಮಣ್ಣು ಕುಸಿದು ಆಳವಾದ ತೆಗ್ಗು ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದರು.

ಇನ್ನೊಂದೆಡೆ, ಪಟ್ಟಣ ಪಂಚಾಯ್ತಿ ವತಿಯಿಂದ ಕುಡಿಯುವ ನೀರಿಗಾಗಿ ಪಟ್ಟಣದ 12ನೇ ವಾರ್ಡ್‌ನಲ್ಲಿ ಪೈಪ್‌ಲೈನ್ ಕಾಮಗಾರಿ ಗುತ್ತಿಗೆದಾರರು ಕಾಮಗಾರಿ ಮುಗಿದ ನಂತರ ಸರಿಯಾಗಿ ಮಣ್ಣು ಹಾಕದೇ ಇರುವುದರಿಂದ ರಸ್ತೆ ಮಧ್ಯದಲ್ಲಿ ಭೂ ಕುಸಿತವಾಗಿದೆ.

‘ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು, ತ್ವರಿತವಾಗಿ ಭೂ ಕುಸಿತವಾದ ಪ್ರದೇಶದಲ್ಲಿ ಮಣ್ಣು ಹಾಕಿ ಮುಚ್ಚಬೇಕು ಎಂದು ಸ್ಥಳೀಯ ನಿವಾಸಿ ಗಳಾದ ಸೀರಾಜ ಹೊಸಮನಿ, ರಮೇಶ ಕಾಟಿ, ನಿಂಗಪ್ಪ ಹೊನ್ನಾಪುರ, ಲಕ್ಷ್ಮವ್ವ ಚಿಕ್ಕೋಪದ, ಫಾತಿಮಾ ಹೊಸಮನಿ, ದೇವಕ್ಕ ಆಲೂರು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.