ಮುಂಡರಗಿ: ಕ್ರೀಡಾಪಟು ಶಿಂಗಟಾಲೂರ ಗ್ರಾಮದ ವೀರಣ್ಣ ಸೋವೇನಹಳ್ಳಿ ಅವರು ದಶಕಗಳಿಂದ ತಾಲ್ಲೂಕಿನ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿರುವುದು ವಿಶೇಷ ಎನಿಸಿದೆ. ಈ ಮೂಲಕ ವೀರಣ್ಣ ಅವರು ಈ ಭಾಗದಲ್ಲಿ ಆಟದ ಮಾಸ್ತರ್ ಎಂದೇ ಪ್ರಖ್ಯಾತಿ.

ಶಿಂಗಟಾಲೂರ ಗ್ರಾಮದ ವೀರಣ್ಣ ಸೋವೇನಹಳ್ಳಿ ಅವರು ಪದವಿಧರರಾಗಿದ್ದು, ಶಾಲಾ, ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು. ಕಬ್ಬಡ್ಡಿ, ವಾಲಿಬಾಲ್, ಕ್ಕೊಕ್ಕೊ ಮೊದಲಾದ ಕ್ರೀಡೆಗಳಲ್ಲಿ ನೈಪುಣ್ಯ ಸಾಧಿಸಿ, ರಾಜ್ಯಮಟ್ಟದ ಕ್ತೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದರು. ಸದ್ಯ ಗ್ರಾಮದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಎಂದು ಕಾರ್ಯನಿರ್ವಹಿಸುತ್ತಿರುವ ಅವರು ಸಂಜೆ ಬಿಡುವಿನ ಸಮಯದಲ್ಲಿ ಹತ್ತಿರದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಮಕ್ಕಳು ಹಾಗೂ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.

ಕ್ರೀಡೆಗಳ ನಿಯಮಗಳನ್ನು ತಿಳಿದುಕೊಂಡಿರುವ ವೀರಣ್ಣ ಅವರು ಯಾವ ಆಟಗಳನ್ನು ಹೇಗೆ ಆಡಬೇಕು?, ಸ್ಪರ್ಧೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?, ಸ್ಪರ್ಧೆಯಲ್ಲಿ ಗೆಲ್ಲಲು ಯಾವೆಲ್ಲ ತಂತ್ರಗಾರಿಕೆಗಳನ್ನು ಬಳಸಬೇಕು? ಗುಂಪು ಆಟಗಳಲ್ಲಿ ಎದುರಾಳಿಗಳನ್ನು ಹೇಗೆ ಹಿಮ್ಮೆಟ್ಟಿಸಬೇಕು? ಎನ್ನುವ ಹಲವಾರು ತಂತ್ರಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಾರೆ. ಕ್ರೀಡಾಕೂಟಗಳಿಗೆ ತೆರಳಿ ಮಕ್ಕಳನ್ನು ಹುರಿದುಂಬಿಸುತ್ತಾರೆ.

ವೀರಣ್ಣನವರ ಕ್ರೀಡಾಸಕ್ತಿ, ಕ್ರೀಡಾಭಿಮಾನ, ಕ್ರೀಡಾಜ್ಞಾನ ಮೊದಲಾದವುಗಳನ್ನು ಅರಿತಿರುವ ತಾಲ್ಲೂಕು ಶಿಕ್ಷಣ ಇಲಾಖೆಯು ತಾಲ್ಲೂಕಿನ ಯಾವುದೆ ಭಾಗದಲ್ಲಿ ಕ್ರೀಡಾಕೂಟ ನಡೆದರೂ ವೀರಣ್ಣ ಅವರನ್ನು ನಿರ್ಣಾಯಕರಾಗಿ ಕಾರ್ಯನಿರ್ವಹಿಸಲು ಆಹ್ವಾನಿಸುತ್ತಾರೆ. ಬಿಇಒ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ವೀರಣ್ಣನವರು ಅಚ್ಚುಕಟ್ಟಾಗಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಿಕೊಡುತ್ತಾರೆ.

ಗದಗ, ಕೊಪ್ಪಳ, ಬಳ್ಳಾರಿ, ಹಾವೇರಿ ಮೊದಲಾದ ಜಿಲ್ಲೆಗಳ ಕ್ರೀಡಾಕೂಟಗಳಲ್ಲಿ ಹಾಗೂ ಹಬ್ಬ, ಹರಿದಿನಗಳಲ್ಲಿ ಆಯಾ ಗ್ರಾಮಗಳಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ವೀರಣ್ಣನವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಕ್ರೀಡಾಸಕ್ತಿಯನ್ನು ಪರಿಗಣಿಸಿ ಹಲವು ಸಂಘ, ಸಂಸ್ಥೆಗಳು, ಶಾಲಾ, ಕಾಲೇಜುಗಳು, ಗಣ್ಯಮಾನ್ಯರು ಅವರನ್ನು ಸನ್ಮಾನಿಸಿ ಗೌರವಿಸಿವೆ.

’ಬಹುತೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದೆ. ಕ್ರೀಡಾಕೂಟದ ಪೂರ್ವದಲ್ಲಿ ಅಲ್ಲಿಯ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವುದು ಅನಿವಾರ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಪದಾಧಿಕಾರಿಗಳು ಮಕ್ಕಳಿಗೆ ಕ್ರೀಡಾತರಬೇತಿ ನೀಡುವಂತೆ ವೀರಣ್ಣನವರಿಗೆ ದುಂಬಾಲು ಬೀಳುತ್ತಾರೆ. ವೀರಣ್ಣನವರು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಆಟೋಟಗಳ ತರಬೇತಿ ನೀಡುತ್ತಾರೆ.

ಬಾಲ್ಯದಿಂದಲೂ ನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿಯಿದ್ದು ಬಿಡುವಿನ ಸಮಯದಲ್ಲಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ತರಬೇತಿ ನೀಡುತ್ತೇನೆ. ಇದರಿಂದ ನನಗೂ ಖುಷಿಯಾಗುತ್ತದೆ.
ವೀರಣ್ಣ ಸೋವೇನಹಳ್ಳಿ ಶಿಂಗಟಾಲೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.