ನರಗುಂದ: ಕನ್ನಡವನ್ನು ರಾಜ್ಯ ಭಾಷೆಯನ್ನಾಗಿ ಮಾಡಿಕೊಂಡು ಆಡಳಿತವನ್ನು ಮಾಡಿದ ಕನ್ನಡದ ಮೊಟ್ಟಮೊದಲ ರಾಜಮನೆತನ ಕದಂಬರು. ಕನ್ನಡ ನಾಡು- ನುಡಿಗೆ ಅವರ ಕೊಡುಗೆ ಅಪಾರ ಎಂದು ಜಕ್ಕಲಿಯ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಬುಧವಾರ ನಡೆದ ಕನ್ನಡದ ರಾಜರು ಕನ್ನಡ ತಿಂಗಳು ವಿಶೇಷ ಉಪನ್ಯಾಸ ಮಾಲಿಕೆಯ 1 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕದಂಬರು ಶಿಲ್ಪಕಲಾ ಪರಂಪರೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. 4 ನೇ ಶತಮಾನದಲ್ಲಿ ದೊರೆತ ಹಲ್ಮಿಡಿ ಶಾಸನ ಕದಂಬರ ಆಡಳಿತ ಭಾಷೆ ಕನ್ನಡವಾಗಿತ್ತು ಎಂಬುದಕ್ಕೆ ಮುಖ್ಯ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡಿಗರ ಮೂಲ ನೆಲೆ ಕಲ್ಪಿಸಿದ ಕದಂಬರ ಮಯೂರವರ್ಮ ಕನ್ನಡ ಮತ್ತು ಕನ್ನಡಿಗರಿಗೆ ಅಸ್ಮಿತೆ ತಂದುಕೊಟ್ಟರು. ತಾಳಗುಂದ ಸಮೀಪ ಮಯೂರ ಶರ್ಮ ಹುಟ್ಟಿದ. ಅವರ ಮನೆ ಕದಂಬ ವೃಕ್ಷದ ಬಳಿಯೇ ಇದ್ದ ಕಾರಣ ಅವರನ್ನು ಕದಂಬರು ಎಂದು ಕರೆದರು. ಕರ್ನಾಟಕದ ವಿವಿದ ಭಾಗಗಳಲ್ಲಿ ಕಲ್ಲಿನಲ್ಲಿ ಬರಹಗಳನ್ನು ಮೊಟ್ಟಮೊದಲಿಗೆ ಕೆತ್ತಿಸಿದ ಕೀರ್ತಿ ಕದಂಬ ರಾಜರಿಗೆ ಸಲ್ಲುತ್ತದೆ. ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡವನ್ನು ಹುಟ್ಟುಹಾಕುವಲ್ಲಿ ಕದಂಬರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಶಿವಯ್ಯ ಹಿರೇಮಠ, ನರಗುಂದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ ಸಿ ಹನಮಂತಗೌಡ್ರ, ಶಸಾಪ ತಾಲ್ಲೂಕು ಅಧ್ಯಕ್ಷ ಎಸ್.ಜಿ. ಮಣ್ಣೂರಮಠ, ಗ್ರಾಮ ಪಂಚಾಯಿತಿ ಅದ್ಯಕ್ಷ ಶರಣಬಸಪ್ಪ ನರಸಾಪೂರ, ಜ್ಞಾನದೇವ ಮನೇನಕೊಪ್ಪ, ಸಾಹಿತ್ಯ ವೇದಿಕೆ ಸದಸ್ಯರಾದ ಮಂಜುನಾಥ ಮೆಣಸಗಿ, ರವಿ ಮೆಣಸಗಿ, ಸೋಮು ಹೊಂಗಲ್, ಸುನೀಲ ಕಳಸದ, ಆರ್.ಬಿ. ಚಿನಿವಾಲರ, ಆರ್.ಕೆ. ಐನಾಪೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.