ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘2015ರಲ್ಲಿ ನಡೆಸಿದ ಜಾತಿ ಜನಗಣತಿ ಸರಿಯಾಗಿಲ್ಲ. ಅದು ಕಪೋಲಕಲ್ಪಿತ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ಬುಧವಾರ ನಡೆದ ಪಂಚ ಪೀಠಾಧೀಶರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಲಿಂಗಾಯತ ಎನ್ನುವುದು ಒಂದು ಜಾತಿ ಅಲ್ಲ. ಲಿಂಗಾಯತರು ಎಸ್ಸಿ ಮತ್ತು ಎಸ್ಟಿ ಹಿಡಿದು ಎಲ್ಲ ಜಾತಿಗಳಲ್ಲೂ ಇದ್ದಾರೆ. ಎಲ್ಲ ಲಿಂಗಾಯತರಿಗೆ ಆಚಾರ, ಸಂಸ್ಕಾರ ಒಂದೇ ಆಗಿರುತ್ತದೆ’ ಎಂದರು.

‘ಹಾವನೂರ ವರದಿ ಲಿಂಗಾಯತವನ್ನು ಜಾತಿ ಎಂದು ಪರಿಗಣಿಸಿದ ನಂತರ ಇದಕ್ಕೆ ಹೊಡೆತ ಬಿದ್ದಿದೆ. ನಮ್ಮಲ್ಲಿ ಶೇ 80ರಷ್ಟು ಬಡ ಕುಟುಂಬಗಳಿವೆ. 99 ಜಾತಿಗಳೆಲ್ಲ ಒಂದೇ. ಗಾಣಿಗ ಸಮಾಜದ್ದು ಎಂಟು ಲಕ್ಷ ಕಡಿಮೆಯಾಗಿದೆ. ಹಿಂದೂ ಸಾದರ ಎಂದು ಬರೆಸಿದ್ದಕ್ಕೂ ಸಂಖ್ಯೆ ಕಡಿಮೆಯಾಗಿದೆ’ ಎಂದರು.

ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಶ್ರೀಗಳ ಪ್ರಯತ್ನದಿಂದ ಸಮಾವೇಶ ಸಾಧ್ಯವಾಗಿದೆ. ಪಂಚಪೀಠಗಳು ಸನಾತನ ಪೀಠಗಳಾಗಿವೆ. ಎಂದೋ ಈ ಸಮಾವೇಶ ನಡೆಯಬೇಕಾಗಿತ್ತು. ವೀರಶೈವ ಲಿಂಗಾಯತ ಜಾತಿ ಮತ್ತು ಜನಗಣತಿ ಸಮಾಜಕ್ಕೆ ತಿಳಿಸುವ ಉದ್ಧೇಶ ಮುಖ್ಯವಾಗಿದೆ. ಕೇದಾರ ಶ್ರೀಗಳು ಕಾರ್ಯನಿಮಿತ್ತ ಇಂದಿನ ಸಭೆಗೆ ಬಂದಿಲ್ಲ ಎಂದರು.

ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾತನಾಡಿ, ‘ಮೊನ್ನೆ ನಡೆದದ್ದು ಜಾತಿ ಗಣತಿಯಲ್ಲ. ಅದು ಸಾಮಾಜಿಕ ಗಣತಿ. ನಮ್ಮಲ್ಲಿ ಸಾಕಷ್ಟು ಒಳ ಪಂಗಡಗಳಿವೆ. ಕ್ಷೌರಿಕರು ಕುಂಬಾರರು, ಕಂಬಾರರು, ಚಮ್ಮಾರರೂ ಇದ್ದಾರೆ. ಎಲ್ಲ ಪಂಚಾಚಾರ್ಯರು ಒಂದೇ ವೇದಿಕೆಯಲ್ಲಿರುವುದು ಖುಷಿ ತಂದಿದೆ’ ಎಂದರು.

‘ಬೃಹತ್ ಸಮಾವೇಶವನ್ನೇ ಮಾಡಬೇಕಾಗುತ್ತದೆ. ಕೇದಾರ ಜಗದ್ಗುರುಗಳು ಸಮಾವೇಶಕ್ಕೆ ಬರಲು ಒಪ್ಪಿದ್ದಾರೆ. ಐದು ಪಂಚಪೀಠಾಧೀಶರನ್ನು ಸೇರಿಸಿ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಸಮಾವೇಶ ನಡೆಸಬೇಕು’ ಎಂದರು.

ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀ, ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಹಿರಿಯ ಶ್ರೀಗಳಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀಗಳಾದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಘದ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.